ಜಂಬೂಸವಾರಿ ಮೆರವಣಿಗೆಗೆ ಮೋದಿ ಚಾಲನೆ ?

ಜಂಬೂಸವಾರಿ ಮೆರವಣಿಗೆಗೆ ಮೋದಿ ಚಾಲನೆ ?
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ  ಅಂತಿಮ ದಿನ ನಡೆಯಲಿರುವ ಜಂಬೂ ಸವಾರಿಗೆ ಪ್ರಧಾನಿ ಮೋದಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾದರೂ ಪ್ರಧಾನಿ ಕಾರ್ಯಾಲಯ ಅಧಿಕೃತವಾಗಿ ತಿಳಿಸಿಲ್ಲ. ಆದರೆ, ರಾಜ್ಯ ಸರಕಾರ ಮೋದಿ ಅವರಿಗೆ ಆಮಂತ್ರಣ ನೀಡಿದ್ದು ತಾಯಿ ಚಾಮುಂಡಿ ದೇವಿ ಮೂರ್ತಿ ಹೊತ್ತು ಸಾಗಲಿರುವ ಭವ್ಯ ಮೆರವಣಿಗೆಗೆ ಮೋದಿ ಪುಷ್ಪಾರ್ಚನೆ ಮಾಡುವ ಸಾಧ್ಯತೆಯಿದೆ.


ಮೈಸೂರು :
ನಾಡಹಬ್ಬ ದಸರಾ ಈ ಬಾರಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉದ್ಘಾಟನೆಗೆ ಬರಲು ಅಧಿಕೃತವಾಗಿ ಒಪ್ಪಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡುವ ಸಾಧ್ಯತೆಯಿದೆ. ರಾಜ್ಯ ಸರ್ಕಾರ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ. ಅವರು ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಷ್ಟ್ರಪತಿ ಹಾಗೂ ಪ್ರಧಾನಿ ಈ ಬಾರಿ ನಾಡಹಬ್ಬಕ್ಕೆ ಮೈಸೂರಿಗೆ ಆಗಮಿಸಿದರೆ ಅದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ.