ಮಟಕಾ ಮ್ಯಾನ್ ಮೇತ್ರಿ ಗಡಿಪಾರು..!

ಮಟಕಾ ಮ್ಯಾನ್ ಮೇತ್ರಿ ಗಡಿಪಾರು..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಮಟಕಾ ಮ್ಯಾನ್ ಮೇತ್ರಿ ಗಡಿಪಾರು..!

2023 ರವರೆಗೆ ಬೆಳಗಾವಿಯಿಂದ ಗೆಟ್ ಔಟ್‌ ..!

ಬೆಳಗಾವಿ : ಮಟಕಾ (ಓಸಿ) ಆಡಲು ಸಾರ್ವಜನಿಕರನ್ನು ಪ್ರೇರೆಪಿಸುತ್ತಿದ್ದ ವ್ಯಕ್ತಿಯನ್ನು ಬೆಳಗಾವಿ ನಗರ ಪೊಲೀಸ್ ಕಮಿಷ್ನರೇಟ್ ವ್ಯಾಪ್ತಿಯಿಂದ ಗಡಿಪಾರು ಮಾಡಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಹಾಗೂ ಡಿಸಿಪಿ (ಅಪರಾಧ & ಸಂಚಾರ) ಪಿ ವಿ ಸ್ನೆಹಾ ಆದೇಶ ಹೊರಡಿಸಿದ್ದಾರೆ.


ಬೆಳಗಾವಿ ನಗರದ ಅನಗೋಳದ ನಿವಾಸಿ ಪರಶುರಾಮ ಬಾಬು ಮೇತ್ರಿ ಗಡಿಪಾರು ಆದ ವ್ಯಕ್ತಿ. ಈತ ಮಟಕಾ ದಂಧೆಯಲ್ಲಿ ತೋಡಗಿದ ಅರೋಪದ ಅಡಿಯಲ್ಲಿ ಈತನ ಮೇಲೆ ಒಟ್ಟು 7 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 4 ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದರೂ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದ ಈತನನ್ನು 2022 ಸೆಪ್ಟೆಂಬರ 19 ರಿಂದ 2023 ಸೆಪ್ಟೆಂಬರ 18 ವರೆಗೆ ಒಂದು ವರ್ಷಗಳ ಕಾಲ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಈ ಮೂಲಕ ಸಮಾಜಘಾತುಕ ಚಟುವಟಿಕೆಗಳನ್ನು ಪಾಲ್ಗೊಳ್ಳುವವರಿಗೆ ನಗರ ಪೊಲೀಸರು ಕಠಿಣ ಸಂದೇಶ ರವಾನಿಸಿದ್ದಾರೆ.