ಕಡೋಲಿ ಪ್ರಸಿದ್ಧ ರೈತ ಕಲ್ಲಣ್ಣಾ ದೇಸಾಯಿ ಆತ್ಮಹತ್ಯೆ ..!

ಕಡೋಲಿ ಪ್ರಸಿದ್ಧ ರೈತ ಕಲ್ಲಣ್ಣಾ ದೇಸಾಯಿ ಆತ್ಮಹತ್ಯೆ ..!
ಮಾನಸಿಕ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ್ರಾ ಬಂಡೆದೆ ರೈತ..?
ಬೆಳಗಾವಿ: ತಾಲೂಕಿನ ಕಡೋಲಿ ಗ್ರಾಮದ ಸುಪ್ರಸಿದ್ಧ ರೈತ ಹಾಗೂ ಪ್ರಸಿದ್ಧ ದೇಸಾಯಿ ಕುಟುಂಬದ ಬಂಡೆದೆ ವ್ಯಕ್ತಿ ಎಂದು ಹೆಸರುವಾಗಿಯಾಗಿದ್ದ ಮಾಯಣ್ಣಾ ಗಲ್ಲಿಯ ನಿವಾಸಿ ಕಲ್ಲಪ್ಪಾ(ಕಲ್ಲಣ್ಣಾ) ಬಸ್ಸಪ್ಪಾ ದೇಸಾಯಿ ಇಂದು(ಮೇ 21) ಬೆಳಗಿನ ಜಾವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ 68 ವರ್ಷ ವಯಸ್ಸಾಗಿತ್ತು.
ಆತ್ಮಹತ್ಯೆಗೆ ಕುಟುಂಬದಲ್ಲಿನ ಮಾನಸಿಕ ಕಿರುಕುಳವೇ ಕಾರಣ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದಿಂದ ಮನೆಯಲ್ಲಿ ಕೌಟುಂಬಿಕ ಕಲಹ ವಿಪರೀತವಾದ ಹಿನ್ನಲೆಯಲ್ಲಿ ಜೀವನಕ್ಕೆ ಬೇಸತ್ತು ಇಂದು ಬೆಳಗಿನ ಜಾವ ಮನೆಯ ಮೊದಲನೇ ಮಹಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಕಡೋಲಿಯಲ್ಲಿ ಕಲ್ಲಪ್ಪಾ ದೇಸಾಯಿ ಕಲ್ಲಣ್ಣಾ ದೇಸಾಯಿ ಎಂದೇ ಪ್ರಸಿದ್ಧರಾಗಿದ್ದರು. ಸ್ವಂತ ಜಮೀನು ಕಡಿಮೆ ಇದ್ದರು ಬೇರೆಯವರ ಹಾಗೂ ಪಕ್ಕದ ಊರಿನವರ 50 ಎಕರೆಯಷ್ಟು ಜಮೀನನ್ನು ಬಾಡಿಗೆ ಮೇಲೆ ತೆಗೆದುಕೊಂಡು ವ್ಯವಸಾಯ ಮಾಡುತ್ತಿದ್ದರು. ಸುತ್ತಮುತ್ತಲಿನ 10 ಗ್ರಾಮಗಳಲ್ಲಿ ಇವರನ್ನು ಬಂಡೆಕಲ್ಲು ರೈತ ಎಂದು ಕರೆಯುತ್ತಿದ್ದರು. ಸಾವಿರಾರು ಚೀಲ ಆಲೂಗಡ್ಡೆ, ಕ್ಯಾಬಿಸ್, ಭತ್ತ ಬೇಳೆದು ವ್ಯವಸಾಯದಲ್ಲಿ ದೇಸಾಯಿ ಕುಟುಂಬವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಮೃತರ ಅಗಲಿಕೆಯಿಂದ ಕಡೋಲಿ ಹಾಗೂ ದೇಸಾಯಿ ಕುಟುಂಬ ದುಃಖದ ಮಡುವಿನಲ್ಲಿ ಮುಳಗಿದಂತಾಗಿದೆ.
ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2 ಗಂಟೆಗೆ ಕಡೋಲಿಯ ದೇಸಾಯಿ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಲಿದೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಕೊಂಡಿದ್ದಾರೆ.