ಜೈನಧರ್ಮ ವಿಶ್ವದಲ್ಲೇ ಅಹಿಂಸಾ ಪರಮೋ ಧರ್ಮ : ಮಾಜಿ ಸಚಿವ ಶ್ರೀಮಂತ ಪಾಟೀಲ ಅಭಿಮತ 

ಜೈನಧರ್ಮ ವಿಶ್ವದಲ್ಲೇ ಅಹಿಂಸಾ ಪರಮೋ ಧರ್ಮ : ಮಾಜಿ ಸಚಿವ ಶ್ರೀಮಂತ ಪಾಟೀಲ ಅಭಿಮತ 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಶೇಡಬಾಳ :

ಶೇಡಬಾಳ ಪಟ್ಟಣದಲ್ಲಿ ಶ್ರೀ ಆದಿನಾಥ ದಿಗಂಬರ ಜೈನ ಮಂದಿರದ ವತಿಯಿಂದ ಆಯೋಜಿಸಿದ್ದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ  ಕಾಗವಾಡ ಮತಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ ಅವರು ಭಾಗವಹಿಸಿ, ತೀರ್ಥಂಕರಿಗೆ ವಿಶೇಷ ಪೂಜೆ ಸಲ್ಲಿಸಿ, ಮುನಿ ಮಹಾರಾಜರ ಆಶೀರ್ವಾದ ಪಡೆದರು.

ಶಾಸಕರು ಮಾತನಾಡಿ, ಶೇಡಬಾಳ ಪಟ್ಟಣದಲ್ಲಿ ಎಲ್ಲರೂ ಒಂದಾಗಿ ಈ ಒಂದು ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತೋಷದ ವಿಷಯ. ವಿಶ್ವದಲ್ಲಿ ಜೈನಧರ್ಮವು ಒಂದು ಅಹಿಂಸಾ ಪರಮೋಧರ್ಮವಾಗಿದ್ದು ಅವುಗಳ ತತ್ವ ಮತ್ತು ಸಿದ್ಧಾಂತಗಳ ಮೇಲೆ ವಿಶ್ವವ್ಯಾಪ್ತಿ ಶಾಂತಿ ಹಾಗೂ ಸಾಮರಸ್ಯದ ಜೀವನಕ್ಕೆ ದಾರಿಯಾಗಿದೆ. ಆ ತತ್ವಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. 

ಜೈನ  ಸಮಾಜದ ಮುನಿ ಮಹಾರಾಜರು, ಸ್ವಾಮೀಜಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು, ಜೈನ ಸಮಾಜದ ಶ್ರಾವಕ ಶ್ರಾವಕಿಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.