ಇನ್ಶೂರ್‌ಟೆಕ್‌  ಕಂಪನಿ ಟರ್ಟಲ್‌ಮಿಂಟ್‌ನಿಂದ ಭಾರಿ ಬಂಡವಾಳ ಸಂಗ್ರಹ  ; ಅಮನ್ಸಾ ಮತ್ತು ಜಂಗಲ್ ವೆಂಚರ್ಸ್ ಸಹಯೋಗದಲ್ಲಿ ಸಿರೀಸ್‌ ಇ ನಿಧಿಯಡಿ ಸಂಗ್ರಹಿಸಲಿದೆ  120 ದಶಲಕ್ಷ ಡಾಲರ್‌ ಬಂಡವಾಳ 

ಇನ್ಶೂರ್‌ಟೆಕ್‌  ಕಂಪನಿ ಟರ್ಟಲ್‌ಮಿಂಟ್‌ನಿಂದ ಭಾರಿ ಬಂಡವಾಳ ಸಂಗ್ರಹ  ; ಅಮನ್ಸಾ ಮತ್ತು ಜಂಗಲ್ ವೆಂಚರ್ಸ್ ಸಹಯೋಗದಲ್ಲಿ ಸಿರೀಸ್‌ ಇ ನಿಧಿಯಡಿ ಸಂಗ್ರಹಿಸಲಿದೆ  120 ದಶಲಕ್ಷ ಡಾಲರ್‌ ಬಂಡವಾಳ 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಮುಂಬಯಿ, ಏಪ್ರಿಲ್‌ 29, 2022: ಭಾರತದ ಅತಿದೊಡ್ಡ ವಿಮಾ ಸಲಹೆ ಕೇಂದ್ರಿತ ಇನ್ಶೂರ್‌ಟೆಕ್‌ ಪ್ಲಾಟ್‌ಫಾರ್ಮ್‌ ಟರ್ಟಲ್‌ಮಿಂಟ್‌ ಕಂಪನಿಯು  ಅಮನ್ಸಾ ಕ್ಯಾಪಿಟಲ್ ಮತ್ತು ಜಂಗಲ್‌ ವೆಂಚರ್ಸ್‌ ಸಹಯೋಗದಲ್ಲಿ ಇ ಸಿರೀಸ್‌ನ ನಿಧಿಯಡಿ 120 ದಶಲಕ್ಷ ಡಾಲರ್‌ ನಿಧಿ ಸಂಗ್ರಹದ ಘೋಷಣೆ ಮಾಡಿದೆ. ಈ ವಹಿವಾಟು ಸುತ್ತಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಹೂಡಿಕೆದಾರರ ಜತೆಗೆ ಹೊಸ ಹೂಡಿಕೆದಾರ ಕಂಪನಿಗಳೆನಿಸಿದ ವಿಟ್ರುವಿಯನ್‌ ಪಾರ್ಟ್ನರ್ಸ್‌ ಮತ್ತು ಮಾರ್ಷಲ್ ವೇಸ್ ಕೂಡ ಭಾಗವಹಿಸಿದ್ದವು. ಇದರೊಂದಿಗೆ ಕಂಪನಿಯು ಆರಂಭದಿಂದಲೂ ಇದುವರೆಗೆ  ಸಂಗ್ರಹಿಸಿದ ನಿಧಿಯ ಮೊತ್ತ 190 ದಶಲಕ್ಷ ಡಾಲರ್‌ವರೆಗೆ ಬರುತ್ತದೆ. ಹೊಸ ಭೌಗೋಳಿಕ ಪ್ರದೇಶದಲ್ಲಿ ತನ್ನ ವಹಿವಾಟು ವಿಸ್ತರಿಸಲು, ಮಾರುಕಟ್ಟೆ ಹಿಡಿತದ ನಾಯಕತ್ವವನ್ನು ಬಲಶಾಲಿಗೊಳಿಸಲು ಮತ್ತು ತರಹೇವಾರಿ ಉತ್ಪನ್ನಗಳನ್ನು ಸದೃಢಗೊಳಿಸಲು ಹೊಸ ನಿಧಿಯನ್ನು ಬಳಸಲು ಕಂಪನಿಯು ಉದ್ದೇಶಿಸಿದೆ. 

ಧೀರೇಂದ್ರ ಮಹ್ಯಾವಂಶಿ ಮತ್ತು ಆನಂದ್ ಪ್ರಭುದೇಸಾಯಿ  ಅವರು 2015ರಲ್ಲಿ ಹುಟ್ಟುಹಾಕಿದ ಟರ್ಟಲ್‌ಮಿಂಟ್‌ ಒಂದು ಡಿಜಿಟಲ್ ವೇದಿಕೆಯಾಗಿರುವ ಕಂಪನಿಯಾಗಿದೆ. ಮುಂಬಯಿ ಮೂಲದ ಈ ಕಂಪನಿಯು, ತಮ್ಮ ಗ್ರಾಹಕರಿಗೆ ವಿಮಾ ಉತ್ಪನ್ನಗಳನ್ನು ವಿವರಿಸಲು ಹಾಗೂ ವಿತರಿಸಲು ಹಣಕಾಸು ಸಲಹೆಗಾರರಿಗೆ ಅಗತ್ಯ ಸಲಹಾತ್ಮಕ ನೆರವು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಂಡಿದೆ. ಹಣಕಾಸು ಸಲಹೆಗಾರರಿಗೆ ಪ್ರತಿ ಗ್ರಾಹಕನ ವಿಶಿಷ್ಟ ಅಗತ್ಯಗಳಿಗೆ ಯಾವುದು ಸೂಕ್ತ ವಿಮಾ ಉತ್ಪನ್ನ ಎಂಬುದನ್ನು ಅರಿತು ತಕ್ಷಣವೇ ಸಲಹೆ ನೀಡಲು ಈ ವೇದಿಕೆ ಸಹಾಯ ಮಾಡುತ್ತದೆ. ಇಲ್ಲಿ ಎಲ್ಲ ವಹಿವಾಟೂ ಡಿಜಿಟಲ್‌ ರೂಪದಲ್ಲಿ ನಡೆಯುವುದರಿಂದ ಕಾಗದಪತ್ರಗಳ ತಾಪತ್ರಯ ಇರುವುದಿಲ್ಲ. 

ಟರ್ಟಲ್‌ಮಿಂಟ್‌ ಸಲಹಾ ಸಮುದಾಯವು ಇಂದು ಭಾರತದಲ್ಲಿ 15,000+ ಪಿನ್‌ಕೋಡ್‌ಗಳಲ್ಲಿ ಅಂದರೆ ಅಷ್ಟು ನಗರಗಳಲ್ಲಿ ಈ ವೇದಿಕೆಯನ್ನು  ಬಳಸಿಕೊಂಡು 160,000+ ವಿಮಾ ಸಲಹೆಗಾರರನ್ನು ಹೊಂದಿದೆ.  ಟರ್ಟಲ್‌ಮಿಂಟ್‌ನ ಸಲಹೆಗಾರ ಅಪ್ಲಿಕೇಷನ್‌ಅನ್ನು ʻಟರ್ಟಲ್‌ಮಿಂಟ್‌ಪ್ರೊʼ ಎಂದು ಬ್ರ್ಯಾಂಡ್‌ ಮಾಡಲಾಗಿದೆ. ನೋಂದಣಿಯಾದ ಪಿಒಎಸ್‌ಪಿ ಸಲಹೆಗಾರರು ಸರಳ ಮೊಬೈಲ್‌ ಅಪ್ಲಿಕೇಶನ್ ಬಳಸಿ ತಮ್ಮ ವಿಮಾ ವ್ಯವಹಾರವನ್ನು ಸಂಪೂರ್ಣವಾಗಿ ನಿರ್ವಹಿಸಲು ಇದು ಅನುಮತಿಸುತ್ತದೆ. ಹಣಕಾಸು ಸಲಹೆಗಾರರಿಗೆ ಆರೋಗ್ಯ ವಿಮೆ, ಲೈಫ್‌ ಇನ್ಶ್ಯೂರೆನ್ಸ್‌, ಪಿಎ (ವೈಯಕ್ತಿಕ ಅಪಘಾತ ವಿಮೆ), ಮೋಟಾರು ವಾಹನ ವಿಮೆ ಇತ್ಯಾದಿ ಉತ್ಪನ್ನಗಳ ಶ್ರೇಣಿಯನ್ನು ಮಾರಾಟ ಮಾಡುವುದರ ಜತೆಗೆ, ವೈಯಕ್ತಿಕ ಅಗತ್ಯಕ್ಕೆ ಅನುಗುಣವಾಗಿ ಸಿದ್ಧಪಡಿಸಲಾದ ಬ್ರ್ಯಾಂಡೆಡ್‌ ವಿಷಯ ಮತ್ತು ಸಲಹೆಗಳನ್ನು ರವಾನಿಸುವ ಮೂಲಕ ಗ್ರಾಹಕ ಬಾಂಧವ್ಯ ಬಲಪಡಿಸಿಕೊಳ್ಳುವ ಸಾಮರ್ಥ್ಯವನ್ನೂ ಈ ಅಪ್ಲಿಕೇಷನ್‌ ಒದಗಿಸುತ್ತದೆ. ಅಲ್ಲದೇ ಈ ಅಪ್ಲಿಕೇಶನ್‌ನಲ್ಲಿ ಪ್ರಸ್ತುತಪಡಿಸಲಾಗಿರುವ ಟರ್ಟಲ್‌ಮಿಂಟ್‌ ಅಕಾಡೆಮಿ ವಿಭಾಗದ ಮೂಲಕ ಹಣಕಾಸು ಸಲಹೆಗಾರರು ಮೊಬೈಲ್‌ ಆಧಾರಿತ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಪ್ರಯೋಜನವನ್ನೂ ಪಡೆದುಕೊಳ್ಳಬಹುದಾಗಿರುತ್ತದೆ. 

ಕಂಪನಿಯು ಇತ್ತೀಚೆಗೆ ವಿಮೆಯಿಂದ ಹಿಡಿದು ಬ್ಯಾಂಕ್‌ ಮತ್ತು ಇತರ ವಿತರಕ ಸೇವೆಗಳನ್ನು ಡಿಜಿಟಲ್‌ ರೂಪದಲ್ಲಿ ಒದಗಿಸುವ ಸಾಹಸವನ್ನು ಮಧ್ಯಪ್ರಾಚ್ಯದಲ್ಲೂ ವಿಸ್ತರಿಸುವ ಮೂಲಕ ಗಮನ ಸೆಳೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೂ ವಿಸ್ತರಿಸಿಕೊಳ್ಳಲು ಯೋಜಿಸುತ್ತಿರುವ ಕಂಪನಿಯು ಆಗ್ನೇಯ ಏಷ್ಯಾದ ಮಾರುಕಟ್ಟೆ ಮೇಲೂ ಗಮನಹರಿಸಿದೆ. 

ಈ ಬೆಳವಣಿಗೆ ಬಗ್ಗೆ ಮಾತನಾಡಿದ ಟರ್ಟಲ್‌ಮಿಂಟ್‌ ಸಹ ಸಂಸ್ಥಾಪಕ ಧೀರೇಂದ್ರ ಮಹ್ಯಾವಂಶಿ, ʻʻಭಾರತದಲ್ಲಿ ವಿಮಾ ಉದ್ಯಮವು ಪರಿವರ್ತನೆಯ ಉತ್ತುಂಗದಲ್ಲಿದೆ. ಈ ಪಯಣದಲ್ಲಿ ವೇಗವರ್ಧಕ ಪಾತ್ರವನ್ನು ನಮ್ಮ ಕಂಪನಿ ವಹಿಸುತ್ತಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ವಿಮೆ ಎಂಬುದು ಪ್ರಮುಖ ಅಪಾಯ ಕಡಿಮೆಗೊಳಿಸುವ ಆರ್ಥಿಕ ಸಾಧನವಾಗಿದ್ದು, ಅದು ಸಾರ್ವತ್ರಿಕವಾಗಿ ಸಿಗುವಂತಾಗಬೇಕಾಗಿದೆ. ಆದಾಗ್ಯೂ, ವಿಮಾ ಖರೀದಿಯು ಪಯಣದ ಒಂದು ಭಾಗ ಮಾತ್ರ ಎಂದು ನಾವು ನಂಬುತ್ತೇವೆ. ಆದರೆ ಅಷ್ಟೇ ಮುಖ್ಯವಾದ ಇನ್ನೊಂದು ಅಂಶವೆಂದರೆ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿರುತ್ತದೆ. ಡಿಜಿಟಲ್ ಪರಿಹಾರಗಳ ಮೂಲಕ ಈ ಎರಡೂ ಅಂಶಗಳನ್ನು ಸಮಗ್ರವಾಗಿ ಕಾಣುವಂತೆ ನಮ್ಮ ಉತ್ಪನ್ನಗಳನ್ನು ವಿನ್ಯಾಸಗೊಳಿಸಿರುವುದರಿಂದ ಇದು ವಿಮಾ ಸಲಹೆಗಾರರನ್ನು ಸಶಕ್ತಗೊಳಿಸಲಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನವು ಟರ್ಟಲ್‌ಮಿಂಟ್‌ನ ಪ್ರಮುಖ ಕೇಂದ್ರಬಿಂದುವಾಗಿದ್ದು, 2ನೇ ಮತ್ತು 3ನೇ ದರ್ಜೆಯ ನಗರಗಳು ಹಾಗೂ ಅದರಾಚೆಗೂ ಹೆಜ್ಜೆಗುರುತುಗಳನ್ನು ಮುಂದುವರಿಸುವುದಕ್ಕೆ ಇದು ಅಗತ್ಯವಾಗಿದೆ.  2025ರ ವೇಳೆಗೆ ನಾವು 1ದಶಲಕ್ಷ + ಸಲಹೆಗಾರರನ್ನು  ಆನ್‌ಬೋರ್ಡ್‌ ಹೊಂದುವ ಗುರಿಯನ್ನು ಹೊಂದಿದ್ದೇವೆ. ಇದು ಭಾರತದಲ್ಲಿ ನಮ್ಮ ಬೆಳವಣಿಗೆಯ ವೇಗವನ್ನು ಇನ್ನಷ್ಟು ಹೆಚ್ಚಿಸಲಿದೆ. ಅಲ್ಲದೇ ಭಾರತ ಮತ್ತು ಮಧ್ಯಪ್ರಾಚ್ಯದ ಹಣಕಾಸು ಸಂಸ್ಥೆಗಳಿಗೆ ನಮ್ಮ ಉತ್ಪನ್ನಗಳನ್ನು ಒದಗಿಸಲು ನಮ್ಮ ತಂತ್ರಜ್ಞಾನ ಪರಿಣತಿಯನ್ನು ಸಹ ಬಳಸಿಕೊಳ್ಳುತ್ತಿದ್ದೇವೆ. ಮಧ್ಯಪ್ರಾಚ್ಯದಲ್ಲಿ ನಾವು ಎಪಿಐ ಆಧಾರಿತ ಪರಿಹಾರಗಳಿಗಾಗಿ ಪ್ರಮುಖ ಬ್ಯಾಂಕ್‌ಗಳೊಂದಿಗೆ ಪಾಲುದಾರರಾಗಿದ್ದೇವೆ,ʼʼ ಎಂದು ಹೇಳಿದರು.

ʻʻಭಾರತವು ವಿಶೇಷವಾಗಿ ಆರೋಗ್ಯ ವಿಮಾ ಉತ್ಪನ್ನಗಳ ಬೇಡಿಕೆಯ ದೃಷ್ಟಿಯಿಂದ ನಿರ್ಣಾಯಕ ಹಂತದಲ್ಲಿದೆ. 2ನೇ ಮತ್ತು 3ನೇ ದರ್ಜೆಯ  ನಗರಗಳು ಈ ಬೇಡಿಕೆಯ ಗಮನಾರ್ಹ ಭಾಗವನ್ನು ಹೊಂದಿರುತ್ತವೆ. ವಿಮಾ ಖರೀದಿ ಮತ್ತು ಕ್ಲೈಮ್ ಜರ್ನಿಯ ಸಮಯದಲ್ಲಿ ವ್ಯಕ್ತಿಗಳು ಸಹಾಯ ಪಡೆಯುವುದನ್ನು ಮುಂದುವರಿಸುವುದರಿಂದ, ಕೊನೆ ಹಂತದ ವಿತರಣೆವರೆಗೂ ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಅದನ್ನು ಸಶಕ್ತಗೊಳಿಸಬೇಕಾಗಿದೆ. ನಮ್ಮ ಆಫ್ಲೈನ್‌ ಮತ್ತು ಆನ್ಲೈನ್‌ ತಂತ್ರಗಾರಿಕೆಯು ಗ್ರಾಹಕರಿಗೆ ಬೇಕಿರುವ ಇಂತಹ ಅಗತ್ಯತೆಯನ್ನು ಪರಿಪೂರ್ಣಗೊಳಿಸುತ್ತದೆ. ನಾವು ವಿವಿಧ ಡಿಜಿಟಲ್‌ ಸ್ವರೂಪದ ಸಾಧನಗಳೊಂದಿಗೆ ನಮ್ಮ ಸಲಹೆಗಾರರನ್ನು ಸಕ್ರಿಯಗೊಳಿಸುತ್ತೇವೆ. ಇದು ಅವರಿಗೆ ಬ್ರ್ಯಾಂಡ್‌ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಬ್ಯುಸಿನೆಸ್‌ ಲೀಡ್‌ಗಳನ್ನು ತಂದುಕೊಡುತ್ತದೆ  ಮತ್ತು ಹೆಚ್ಚುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಗ್ರಾಹಕರಿಗೆ ಆತ್ಮವಿಶ್ವಾಸದಿಂದ ಸೇವೆ ನೀಡಲು ಅನುವಾಗುತ್ತದೆ. ವಿಮಾ ಅವಶ್ಯಕತೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು,  ಉತ್ತಮ ವಿಮಾ ಉತ್ಪನ್ನಗಳ ಮೂಲಕ ಜೀವನಪರ್ಯಂತ ಅಪಾಯಗಳನ್ನು ನಿರ್ವಹಿಸುವುದು ಮತ್ತು ಸುಲಲಿತವಾದ ಕ್ಲೇಮ್ ಅನುಭವವನ್ನು ಪಡೆಯುವ ವಿಷಯಕ್ಕೆ ಬಂದಾಗ ನಾವು ಹೊಸ ನಿಧಿಯ ನೆರವಿನೊಂದಿಗೆ ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒಗಿಸಲು ಹೂಡಿಕೆ ಮಾಡಲಿದ್ದೇವೆ,ʼʼ  ಎಂದು ಟರ್ಟಲ್‌ಮಿಂಟ್‌  ಸಹ ಸಂಸ್ಥಾಪಕ ಆನಂದ್ ಪ್ರಭುದೇಸಾಯಿ ಧ್ವನಿಗೂಡಿಸಿದರು.  

ಜಂಗಲ್ ವೆಂಚರ್ಸ್‌ನ ಪ್ರಿನ್ಸಿಪಲ್‌ ಅರ್ಪಿತ್ ಬೆರಿ ಮಾತನಾಡಿ, ʻʻಭಾರತದಲ್ಲಿ ಸಂಬಂಧಿಕರ ನೆರವಿನಿಂದ ವಿಮೆ ಖರೀದಿಸುವುದು ಸಾಮಾನ್ಯವಾಗಿದೆ. ವಿಮೆ ಖರೀದಿ ಪ್ರಕ್ರಿಯೆ ಪಯಣದಲ್ಲಿ ಹಣಕಾಸು ಸಲಹೆಗಾರರು ಪ್ರಮುಖ ಜವಾಬ್ದಾರಿ ವಹಿಸುವ ಸಮಯ ಈಗ ಬಂದಿದೆ. ಟರ್ಟಲ್‌ಮಿಂಟ್‌ ಕಂಪನಿಯು ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರಿಗೆ ಉತ್ತಮ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಲು ಅಗತ್ಯವಿರುವ ಜ್ಞಾನ ಮತ್ತು ಪರಿಕರಗಳೊಂದಿಗೆ ಹಣಕಾಸು ಸಲಹೆಗಾರರನ್ನು ಸಶಕ್ತಗೊಳಿಸಿದೆ. ಆಕರ್ಷಕ ಮಾರ್ಗದಲ್ಲಿ ಟರ್ಟಲ್‌ಮಿಂಟ್‌ ಭಾರತದಲ್ಲಿ ವಿಮಾ ವಿತರಣೆಯ ಭವಿಷ್ಯವನ್ನು ಉಜ್ವಲಗೊಳಿಸುತ್ತಿದೆ. ಈ ಪಯಣದಲ್ಲಿ ನಾವು ಗುರುತಿಸಿಕೊಳ್ಳಲು ಹೆಮ್ಮೆಪಡುತ್ತೇವೆ" ಎಂದು ಹೇಳಿದರು.

ವಿಟ್ರುವಿಯನ್‌ ಪಾರ್ಟ್ನರ್ಸ್‌ನ ಪಾಲುದಾರರಾದ ಪೀಟರ್ ರೀಡ್,  ʻʻಪಾರದರ್ಶಕತೆ  ಮೂಲಕ ಗ್ರಾಹಕರಿಗೆ ವಿಶ್ವಾಸ ತರಲು ಹಣಕಾಸು ಸಲಹೆಗಾರರನ್ನು ತಂತ್ರಜ್ಞಾನದ ಮೂಲಕ ಸಶಕ್ತಗೊಳಿಸಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ವಿಮಾ ವಹಿವಾಟು ಕ್ಷೇತ್ರ ಡಿಜಿಟಲ್ ಪರಿವರ್ತನೆ ಕಾಣುವಂತೆ ಮಾಡುವಲ್ಲಿ ಟರ್ಟಲ್‌ಮಿಂಟ್‌ ಮುಂಚೂಣಿಯಲ್ಲಿದೆ ಎಂದು ನಾವು ನಂಬುತ್ತೇವೆ. ಭಾರತ ಮತ್ತು ಅದರಾಚೆಗೂ ಸರಳ ಮತ್ತು ಸುಲಭದಲ್ಲಿ ವಿಮೆ ಲಭ್ಯವಾಗುವಂತೆ ಮಾಡುವ ಮೂಲಕ ಟರ್ಟಲ್‌ಮಿಂಟ್‌ನ ಅಸಾಧಾರಣ ತಂಡದೊಂದಿಗೆ ಅವರ ಮುಂದಿನ ಹಂತದ ಬೆಳವಣಿಗೆಯ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ,ʼʼ ಎಂದು ಪ್ರತಿಕ್ರಿಯಿಸಿದರು. 

ನೆಕ್ಸಸ್ ವೆಂಚರ್ ಪಾರ್ಟ್ನರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಗುಪ್ತಾ ಮಾತನಾಡಿ, ʻʻಟರ್ಟಲ್‌ಮಿಂಟ್‌ ಶುರುವಾದಾಗಿನಿಂದಲೂ ಅದರ ಪಯಣದ ಭಾಗವಾಗಲು ನಮಗೆ ಸಂತೋಷವೆನಿಸುತ್ತದೆ. ಈ ಕಂಪನಿಯು ತಂತ್ರಜ್ಞಾನ ಆಧಾರಿತ ಸೇವಾ ವಿಧಾನಗಳನ್ನು ಪರಿಚಯಿಸುವ ಮೂಲಕ ಭಾರತದ ವಿಮಾ ಕ್ಷೇತ್ರವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದಲ್ಲಿ ವಿಮಾ ಕ್ಷೇತ್ರದ ಪ್ರವೇಶಾವಕಾಶಗಳನ್ನು ಹೆಚ್ಚಿಸಲು ಈ ಕಂಪನಿ ಗಮನಾರ್ಹ ಕೊಡುಗೆ ನೀಡುವುದನ್ನು ನಾವು ಎದುರು ನೋಡುತ್ತಿದ್ದೇವೆ ʼʼ ಎಂದು ಅವರು ಹೇಳಿದರು.