ಹಂದಿಗನೂರ ಸೊಸೆ ಶಗಣಮಟ್ಟಿಯಿಂದ ನಾಪತ್ತೆ..!

ಹಂದಿಗನೂರ ಸೊಸೆ ಶಗಣಮಟ್ಟಿಯಿಂದ ನಾಪತ್ತೆ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಹಂದಿಗನೂರ ಸೊಸೆ ಶಗಣಮಟ್ಟಿಯಿಂದ ನಾಪತ್ತೆ..!

ಮದುವೆಯಾಗಿ 10 ವರ್ಷದ ನಂತರ ಗಂಡನನ್ನು ಬಿಟ್ಟು ಹೋಗಿದ್ದೇಕೆ..?

ಬೆಳಗಾವಿ : ತಾಲೂಕಿನ ಹಂದಿನಗೂರ ಗ್ರಾಮದ 28 ವರ್ಷದ ಪ್ರಭಾವತಿ ನಾರಾಯಣ ಕೋಕಿತಕರ ಎಂಬ ಮಹಿಳೆ ತವರುಮನೆಯಾದ ಶಗಣಮಟ್ಟಿ ಗ್ರಾಮದಿಂದ ಕಾಣೆಯಾದ ಮಹಿಳೆ.

10 ವರ್ಷದ ಹಿಂದೆ ಬೆಳಗಾವಿ ತಾಲೂಕಿನ ಹಂದಿಗನೂರ ಗ್ರಾಮದ ನಾರಾಯಣ ಕೋಕಿತಕರ ಎಂಬುವರ ಜೊತೆ ಮದುವೆಯಾಗಿ ಎರಡು ಮಕ್ಕಳಿದ್ದರೂ, ಸೋಮವಾರ ಬೆಳಗಾವಿಯಲ್ಲಿ ನಡೆದ ನರೇಗಾ ಪ್ರತಿಭಟನೆಯಲ್ಲಿ ಭಾಗವಹಿಸಿ ಅಲ್ಲಿಂದ ತವರು ಮನೆಗೆ ಬಂದವಳು ಅಲ್ಲಿಂದ ಗಂಡನಿಗೆ ಮನೆಗೂ ಹೋಗದೆ ಕಾಣೆಯಾಗಿದ್ದಾಳೆ ಎಂದು ಪ್ರಭಾವತಿ ತಾಯಿ ರೇಣುಕಾ ರಮೇಶ ಪಾಟೀಲ ಹಿರೇಬಾಗೇವಾಡಿ ಪೊಲೀಸ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ಮಹಿಳೆ ಕಾಣೆ ಕುರಿತು ಗ್ರಾಮದಲ್ಲಿ ಹಲವು ಊಹಾಪೋಹ ಉದ್ಭವಿಸಿದ್ದು, ಮಹಿಳೆ ಸಿಕ್ಕ ಮೇಲೆ ಉತ್ತರ ಸಿಗಲಿದೆ.

ಕಾಣೆಯಾದ ಮಹಿಳೆ ಪ್ರಭಾವತಿ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೆ ಹಿರೇಬಾಗೇವಾಡಿ ಪಿಐ : 9480804032
ಪಿಎಸ್ಐ : 9611704143
ಕಂಟ್ರೋಲ್ ರೂಮ್: 0831-2405278 ಸಂಪರ್ಕಿಸಲು ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.