ಮುಡಾ ಆಯುಕ್ತರಾಗಿ ಜಿ ಟಿ ದಿನೇಶ್ ಕುಮಾರ್ ನೇಮಕ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ. ಟಿ. ದಿನೇಶ್ ಕುಮಾರ್ ನೇಮಕಗೊಂಡಿದ್ದಾರೆ. ಇಂದು ಸರ್ಕಾರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಉಪ ಆಡಳಿತಾಧಿಕಾರಿಗಳು ಮಲಪ್ರಭಾ ಹಾಗೂ ಘಟಪ್ರಭಾ ಅಚ್ಚುಕಟ್ಟು ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದ ಅವರು ಬೆಳಗಾವಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಪುನರ್ವಸತಿ ಹಾಗೂ ವಿಶೇಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ದಿನೇಶಕುಮಾರ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕೆಲವೇ ದಿನ ಸೇವೆ ಸಲ್ಲಿಸಿ ಜನ ಮನ ಸೆಳೆಯುತ್ತಿದ್ದ ಈ ಅಧಿಕಾರಿ ಶಾಸಕರೊಬ್ಬರ ಹಠದಿಂದ ವರ್ಗಾವಣೆಗೊಂಡಿದ್ದು ಇಲ್ಲಿ ಉಲ್ಲೇಖನೀಯ.
ಜಿ ಟಿ ದಿನೇಶ್ ಕುಮಾರ್ ಅವರ ಚುರುಕುತನ, ಜಿಡ್ಡುಗಟ್ಟಿದನ್ನು ಹೊರ ತೆಗೆಯುವ ಚಾಕಚಕ್ಯತೆ ಮೈಸೂರು ಮುಡಾ ದಲ್ಲಿ ಮುಂದುವರಿಯುವುದರಲ್ಲಿ ಸಂದೇಹವಿಲ್ಲ.