ಖಾನಾಪುರ ತಾಲೂಕಿನ ಸರ್ವತೋಮುಖ ಅಭಿವೃದ್ಧಿ, ಮರಾಠಾ ಸಮಾಜದ ಅಭಿವೃದ್ಧಿ ಕುರಿತು ಪಕ್ಷದ ವರಿಷ್ಠರ ಭೇಟಿ ಮಾಡಿ ಚರ್ಚಿಸಿದ ಡಾ.ಸೋನಾಲಿ ಸರ್ನೋಬತ್ 

ಖಾನಾಪುರ ತಾಲೂಕಿನ ಸರ್ವತೋಮುಖ ಅಭಿವೃದ್ಧಿ, ಮರಾಠಾ ಸಮಾಜದ ಅಭಿವೃದ್ಧಿ ಕುರಿತು ಪಕ್ಷದ ವರಿಷ್ಠರ ಭೇಟಿ ಮಾಡಿ ಚರ್ಚಿಸಿದ ಡಾ.ಸೋನಾಲಿ ಸರ್ನೋಬತ್ 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಖಾನಾಪುರ :
ಖಾನಾಪುರ ತಾಲೂಕಿನ ಕೆಲವು ಗ್ರಾಮಗಳ ರಸ್ತೆ ಸಂಪರ್ಕ ಹಾಗೂ ಸೇತುವೆ ನಿರ್ಮಾಣ, ಮರಾಠಾ ನಿಗಮ ಯೋಜನೆಗಳ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಖಾನಾಪುರ ಬಿಜೆಪಿ ಉಸ್ತುವಾರಿ, ಬೆಳಗಾವಿ ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೊಬತ್ ಚರ್ಚೆ ನಡೆಸಿದರು.

ನಂತರ ಪಕ್ಷದ ವರಿಷ್ಠರನ್ನು ಸತ್ಕರಿಸಿ ಖಾನಾಪುರ ತಾಲೂಕಿನಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಮತ್ತು ಮರಾಠಾ ಸಮಾಜದ ಅಭಿವೃದ್ಧಿ ಮಾಡುವಲ್ಲಿ ನನ್ನ ಕ್ಷೇತ್ರದ ಜನರ ಬಗ್ಗೆ  ಹೆಚ್ಚಾಗಿ ಕಾಳಜಿ ವಹಿಸುವಂತೆ ಅವರು ವರಿಷ್ಠರಿಗೆ ಮನವಿ ಮಾಡಿದರು.

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜೊತೆಗೆ ಕ್ಷೇತ್ರದ ರಾಜಕೀಯ ಬೆಳವಣಿಗೆ ಹಾಗೂ ಮಹಿಳಾ ಮೋರ್ಚಾ ಸಂಘಟನೆಯ ಬಗ್ಗೆ ಚರ್ಚಿಸಿದರು.

 ಖಾನಾಪುರ ತಾಲೂಕಿನ ಬಿಜೆಪಿ ಮುಖಂಡರಾದ ಬಸವರಾಜ ಈಶ್ವರ ಸಾಣಿಕೊಪ್ಪ, ಕಡೇಮನಿ ಅರ್ಜುನ ಗಾವಡೆ, ಅನಂತ ಗಾವಡೆ, ಜ್ಞಾನೇಶ್ವರ ಗಾವಡೆ, ಭಾರತಿ ತಕ್ಕಡೆ, ನಾಗೇಶ್ ರಾಮಜಿ, ವಿನಾಯಕ ನಾಯಕ್ ಮುಂತಾದವರು ಉಪಸ್ಥಿತರಿದ್ದರು.