ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿಗೆ ಬಂದ ಹಣವೆಷ್ಟು ಗೊತ್ತೇ ?

ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿಗೆ ಬಂದ ಹಣವೆಷ್ಟು ಗೊತ್ತೇ ?
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ :
ಕೇಂದ್ರದ ಬಿಜೆಪಿ ಸರಕಾರದ  
ಸಾರಥ್ಯ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿಗೆ ಹಣದ ಮಹಾಪೂರವೇ ಹರಿದುಬಂದಿದೆ. 

2 ವರ್ಷಗಳ ಮೊದಲೇ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಂಡು ಬೆಳಗಾವಿ ಕಂಗೊಳಿಸಬೇಕಾಗಿತ್ತು. ಆದರೆ ಸದ್ಯದ ವಾಸ್ತವ ಪರಿಸ್ಥಿತಿ ಗಮನಿಸಿದರೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗುವ ಮುನ್ನ ಬೆಳಗಾವಿ ಹೇಗಿತ್ತೋ ಇಂದೂ ಸಹ ಅದೇ ಪರಿಸ್ಥಿತಿ ಮುಂದುವರಿದಿದೆ ಎಂದರೆ ಅಚ್ಚರಿಪಡಬೇಕಾಗಿಲ್ಲ. ಇನ್ನೂ ಅರ್ಧಕ್ಕಿಂತಲೂ ಹೆಚ್ಚು ಕಾಮಗಾರಿ ನಡೆಯಬೇಕು.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ( ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ )ಗೆ ಹಣದ ಮಹಾಪೂರವೇ ಹರಿದುಬಂದಿದೆ
 11-05-2016 ರಿಂದ ಆರಂಭವಾಗಿದೆ . ನಿಯೋಜಿತ ಮೊತ್ತ 1000.00 ಕೋಟಿ . ಒಟ್ಟು 103 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ . ಅದರಲ್ಲಿ 50 ಕಾಮಗಾರಿಗಳು ಪೂರ್ಣಗೊಂಡಿದ್ದು , 53 ಕಾಮಗಾರಿಗಳು ಪ್ರಗತಿಯಲ್ಲಿವೆ . ಇದರಲ್ಲಿ ವಿಶೇಷವಾಗಿ ಕಟ್ಟಡ , ರಸ್ತೆ ಕಾಮಗಾರಿಗಳು , ಕೆರೆ ಮತ್ತು ಉದ್ಯಾನವನಗಳ ಅಭಿವೃದ್ಧಿ , ಐಸಿಟಿ , ಶೈಕ್ಷಣಿಕ ಕಾಮಗಾರಿಗಳು ಹಾಗೂ ಆರೋಗ್ಯ ಕ್ಷೇತ್ರ ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ . ಇಲ್ಲಿಯವರೆಗೆ 698.00 ಕೋಟಿ ರೂ.ವೆಚ್ಚವಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸುತ್ತಿರುವ ಅಧಿಕಾರಿಗಳ ಜಿಡ್ಡುಗಟ್ಟಿರುವ ಆಡಳಿತ ವೈಖರಿಯೇ ಯೋಜನೆ 
ಆಮೆಗತಿಯಲ್ಲಿ ಸಾಗಲು ನೇರ ಕಾರಣ ಎನ್ನುವುದು ಬೆಳಗಾವಿ ಜನತೆಯ ಆರೋಪವಾಗಿದೆ.

ಕೇಂದ್ರ ಸರಕಾರ ತನ್ನ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸಲು ಮೇಲಿಂದ ಮೇಲೆ ಕೋಟ್ಯಂತರ ₹ ಹಣದ ಹೊಳೆ ಹರಿಸುತ್ತಿದ್ದರೂ ಅಧಿಕಾರಿಗಳ ನಡೆಯಿಂದ ಬೆಳಗಾವಿ ಅಭಿವೃದ್ಧಿ ಕನಸು ಈಡೇರಿದಂತಾಗಿದೆ.

ಅವಳಿ ನಗರಕ್ಕಿಂತ ಬೆಳಗಾವಿಗೆ 143 ಕೋಟಿ ರೂ. ಹೆಚ್ಚು ಹಣ ಬಿಡುಗಡೆ

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ 30 ಕೋಟಿ ಇತ್ತು, ಸ್ವಾತಂತ್ರ್ಯಾನಂತರ ಈಗ ಈ ಪ್ರಮಾಣ 130 ಕೋಟಿಗೆ ಏರಿದೆ. ನಗರೀಕರಣದಿಂದಾಗಿ ಶೇ.14 ರಷ್ಟಿದ್ದ ನಗರ ಪ್ರದೇಶದ ಜನಸಂಖ್ಯೆಯ ಪ್ರಮಾಣ ಶೇ.37 ಕ್ಕೆ ಏರಿಕೆಯಾಗಿದೆ. ಪ್ರಧಾನಮಂತ್ರಿಗಳ ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭಿಸಿದ್ದು, ರಾಜ್ಯದ 7 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ.
ಅದರಲ್ಲಿ ಬೆಳಗಾವಿ ಹಾಗೂ ದಾವಣಗೆರೆ ನಗರಗಳು ಮೊದಲ ಇಪ್ಪತ್ತು ಮಹಾನಗರಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲು ದಾಖಲು  ಮಾಡಿಕೊಂಡಿದ್ದವು. ಆದರೆ ಬೆಳಗಾವಿ ಮಹಾನಗರ ಮಾತ್ರ ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಜನರ ಕಳವಳಕ್ಕೆ ಕಾರಣವಾಗಿದೆ .

555 ಕೋಟಿ ರೂ. ಹುಬ್ಬಳ್ಳಿ- ಧಾರವಾಡಕ್ಕೆ ಸ್ಮಾರ್ಟ್ ಸಿಟಿ ಯೋಜನೆಗೆ ಇದುವರೆಗೆ ಬಂದಿದೆ. ಆದರೆ ಅದಕ್ಕಿಂತ ಹೆಚ್ಚು ಹಣ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಬಂದಿದೆ. 143  ಕೋಟಿ ರೂಪಾಯಿಗಳು ಬೆಳಗಾವಿ ಮಹಾನಗರಕ್ಕೆ ಇದುವರೆಗೆ ಅವಳಿನಗರ ಕ್ಕಿಂತ ಹೆಚ್ಚುವರಿಯಾಗಿ ಬಂದಿದೆ. ಆದರೂ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಕುಂಠಿತವಾಗುತ್ತಾ ಸಾಗಿದೆ.


ಹುಬ್ಬಳ್ಳಿ ಮತ್ತು ಧಾರವಾಡದ ಸ್ಮಾರ್ಟ್ ಸಿಟಿ ಯೋಜನೆ ಹಿನ್ನಡೆ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಸಿಡಿಮಿಡಿಗೊಂಡಿದ್ದರು. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸದಿದ್ದಲ್ಲಿ ಕ್ರಮ ಜರುಗಿಸುವ ಬಗ್ಗೆ ತಾಕೀತು ಮಾಡಿದ್ದರು. 

ಹುಬ್ಬಳ್ಳಿ ಹಾಗೂ ಧಾರವಾಡ ಕ್ಕಿಂತ ಮೊದಲು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದ ಬೆಳಗಾವಿ ಮಹಾನಗರದತ್ತ ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಇಲ್ಲಿ ನಡೆದಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರೆ ಮಾತ್ರ ಅವುಗಳಿಗೆ ವೇಗ ಸಿಗಬಹುದು ಎನ್ನುವುದು ಬೆಳಗಾವಿ ಜನತೆಯ ಆಗ್ರಹವಾಗಿದೆ.