Breaking news ಅಚ್ಚರಿ ರೀತಿಯಲ್ಲಿ ಮತ್ತೆ ಟಿಕೆಟ್ ಗಿಟ್ಟಿಸಿಕೊಂಡ ಲಕ್ಷ್ಮಣ ಸವದಿ !

ಬೆಂಗಳೂರು :
ಮತ್ತೆ ಅಚ್ಚರಿ ನಿರ್ಧಾರಕ್ಕೆ ಬಂದಿರುವ ಬಿಜೆಪಿ ಇದೀಗ ತನ್ನ ಪಟ್ಟಿಯನ್ನು ಮತ್ತಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ.
ಕೊನೆ ಕ್ಷಣದಲ್ಲಿ ಬಿಜೆಪಿ ತನ್ನ ಪಟ್ಟಿಯನ್ನು ಮತ್ತಷ್ಟು ಪರಿಷ್ಕರಿಸಿದೆ. ಅಚ್ಚರಿಯೆಂಬಂತೆ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಲಿಂಗಾಯತ ಸಮುದಾಯದ
ಕೋಟಾದಡಿ
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಾಯಕ ಸಮುದಾಯದ ಕೋಟಾದಡಿ ಹೇಮಲತಾ ನಾಯ್ಕ್, ಹಿಂದುಳಿದ ಸಮುದಾಯದ ಕೋಟಾದಡಿ ಕೇಶವ ಪ್ರಸಾದ್ ಮತ್ತು ದಲಿತ ಕೋಟಾದಡಿ ಚಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಕೆಲ ದಿನಗಳ ಹಿಂದಷ್ಟೆ ಸಭಾಪತಿ ಸ್ಥಾನ ತ್ಯಜಿಸಿದ್ದ ಮಾಜಿ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರಿಗೆ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.