Belagavi: ಗೋಡೆ ಕುಸಿತ: ಬಾಲಕ ಸಾವು

Belagavi: ಗೋಡೆ ಕುಸಿತ:  ಬಾಲಕ ಸಾವು
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ..

ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ಶುಕ್ರವಾರ(ಜು.15)  ಮತ್ತು ನಾಳೆ ಶನಿವಾರ (ಜು.16) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ: ನಿನ್ನೆ ರಾತ್ರಿ 10.30 ಗಂಟೆಗೆ  ದನ ಕರುಗಳಿಗೆ ಮೇವು ಹಾಕಲು ಬಾಲಕ ಕೊಟ್ಟಿಗೆಗೆ ತೆರಳಿದಾಗ ದನದ ಕೊಟ್ಟಿಗೆ ಗೋಡೆ ದಿಢೀರ  ಕುಸಿದ ಪರಿಣಾಮ ಖಾನಾಪುರ  ತಾಲೂಕಿನ ಲಿಂಗನಮಠದ ಹತ್ತಿರದ ಚುಂಚವಾಡದ 13 ವರುಷದ ಬಾಲಕ ಅನಂತ  ಪಾಶೆಟ್ಟಿ ಮೃತಪಟ್ಟಿದ್ದಾನೆ.

ನಂದಗಡ ಪೊಲೀಸ್ ಠಾಣೆಯ ಸಿಬ್ಬಂದಿ  ಪ್ರಕರಣವನ್ನು ದಾಖಲಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. . ತದನಂತರ ಮೃತ ಬಾಲಕನ ಮರಣೋತ್ತರ ಪರೀಕ್ಷೆಗಾಗಿ ಖಾನಾಪೂರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.