ಬೆಳಗಾವಿ ಗೂಂಡಾಗೆ ಗುಂಡೇಟು ಕೊಟ್ಟ DCP,  ACP ಟೀಮ್..!!

ಬೆಳಗಾವಿ ಗೂಂಡಾಗೆ ಗುಂಡೇಟು ಕೊಟ್ಟ DCP,  ACP ಟೀಮ್..!!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ ಗುಂಡಾಗೆ ಗುಂಡೇಟು ಕೊಟ್ಟ DCP,  ACP ಟೀಮ್..!!

ಪೊಲೀಸರ ಮೇಲೆ ಅಟ್ಯ‍ಾಕ್ ಮಾಡಿದ ಕೊಲೆ ಆರೋಪಿ ಕಾಲಿಗೆ ಶೂಟ್ ..!

ಬೆಳಗಾವಿ: ಬೆಳ್ಳಂಬೆಳಿಗ್ಗೆ ಬೆಳಗಾವಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಬೆಳಗಾವಿಯ ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಶಾಲ್ ಸಿಂಗ್ ಚೌವ್ಹಾನ ಮೇಲೆ ಬೆಳಗಾವಿ ಪೊಲೀಸರು  ಫೈರಿಂಗ್ ಮಾಡಿದ್ದಾರೆ. 

ಕೊಲೆ ಆರೋಪಿ ವಿಶಾಲ್ ಸಿಂಗ್ ಚೌವ್ಹಾನ ಇರುವ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನ ಬಂಧಿಸಲು ತೆರಳಿದ ಡಿಸಿಪಿ ರವೀಂದ್ರ ಗಡಾದಿ ಹಾಗೂ ಎಸಿಪಿ ನಾರಾಯಣ ಬರಮನಿ ಆಂಡ್ ಟೀಮ್ ಬೈಕ್ ಮೇಲೆ ಪರಾರಿಯಾಗುತ್ತಿದ್ದ ಆರೋಪಿ ವಿಶಾಲ್ ಸಿಂಗ್ ಗೆ ಶರಣಾಗುವಂತೆ ತಿಳಿಸಿದ್ದಾರೆ.

ಈ ವೇಳೆ ಪೋಲಿಸ್ ಪೇದೆಯೊಬ್ಬರ ಕೈ ಹಾಗೂ ಬುಜಕ್ಕೆ ಆರೋಪಿ ವಿಶಾಲ್ ಸಿಂಗ್ ಚಾಕುವಿನಿಂದ ಹಲ್ಲೆ ಮಾಡಿದ್ದು, ಮತ್ತೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಎಸಿಪಿ ನಾರಾಯಣ ಬರಮನಿ ವಿಶಾಲ್ ಸಿಂಗ್ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ನಡೆದ ಉದ್ಯಮಿ ರಾಜು ದೊಡಬೊಮ್ಮನವರನ್ನು ಆತನ ಎರಡನೇ ಪತ್ನಿ ಕಿರಣ ಕಡೆಯಿಂದ 10 ಲಕ್ಷ ರೂ ಸುಫಾರಿ ಪಡೆದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಿಶಾಲ್ ಸಿಂಗ್ ಚೌವ್ಹಾನ ಮೇಲೆ ಬೆಳಗಾವಿ, ಮಹಾರಾಷ್ಟ್ರದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಸದ್ಯ ಆರೋಪಿಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.