ಬೆಳಗಾವಿ ಯೋಧನಿಂದ ಪಂಜ‍ಾಬನಲ್ಲಿ ಸಹಚರರ  ಮೇಲೆ ಗುಂಡಿನ ದಾಳಿ; ಐವರ ಸಾವು, ಹಲವರ ಪರಿಸ್ಥಿತಿ ಗಂಭೀರ.

ಬೆಳಗಾವಿ ಯೋಧನಿಂದ ಪಂಜ‍ಾಬನಲ್ಲಿ ಸಹಚರರ  ಮೇಲೆ  ಗುಂಡಿನ ದಾಳಿ;  ಐವರ ಸಾವು, ಹಲವರ ಪರಿಸ್ಥಿತಿ ಗಂಭೀರ.
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಹುಕ್ಕೇರಿ ಯೋಧನಿಂದ ಪಂಜ‍ಾಬನಲ್ಲಿ ಸಹಚರರ  ಮೇಲೆ ಮನಬಂದಂತೆ ಗುಂಡಿನ ದಾಳಿ..!

ಐವರು ಯೋಧರೊಂದಿಗೆ ತಾನೂ ಸಾವನ್ನಪ್ಪಿದ ಸತ್ಯಪ್ಪ, ಹಲವು ಯೋಧರ ಪರಿಸ್ಥಿತಿ ಗಂಭೀರ..!

ದಾಳಿಗೆ ಕಾರಣವಾಯ್ತಾ ಮಾನಸಿಕ ಅಸ್ವಸ್ಥತೆ ..?


ಬೆಳಗಾವಿ: ಪಂಜಾಬ್  ಅಮೃತಸರನ ಅಟ್ಟಾರಿ ಗಡಿಯ ಖೇಸರ್ ನಲ್ಲಿರುವ ಬಿಎಸ್ಎಫ್ ಕ್ಯಾಂಪ್ ನಲ್ಲಿ ಬೆಳಗಾವಿ ಜಿಲ್ಲೆಯ ಕರ್ತವ್ಯ ನಿರತ  BSF ಯೋಧಯೊಬ್ಬ  ಬಂದೂಕಿನಿಂದ ಸಹಚರ ಯೋಧರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಐವರು ಯೋಧರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 10 ಕ್ಕೂ ಹೆಚ್ಚು ಜನ ಯೋಧರನ್ನು ಸಮೀಪದ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ 33 ವರ್ಷದ ಸತ್ಯಪ್ಪಾ ಸಿದ್ದಪ್ಪಾ ಕಿಲಾರಗಿ ಎಂಬಾತನೆ ಗುಂಡಿನ ದಾಳಿ ನಡೆಸಿದ್ದಾಗಿ ಆತನ ಸಂಬಂಧಿಕರು ಪತ್ರಿಕೆಗೆ ತಿಳಿಸಿದ್ದಾರೆ.

ಯೋಧ ಸತ್ಯಪ್ಪಾ ಪಂಜಾಬ್ ನ BSF ಕ್ಯಾಂಪ್ ನಲ್ಲಿ ತನ್ನ ಸಹಚರರ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಗುಂಡು ಹಾರಿಸಿಕೊಂಡಿದ್ದಾಗಿ ಅಲ್ಲಿನ ಅಧಿಕಾರಿಗಳು ಆತನ ಮನೆಯವರಿಗೆ ತಿಳಿಸಿದ್ದಾರೆ ಎಂದು ಅವರ ಸಂಬಂಧಿ ತಿಳಿಸಿದ್ದಾರೆ.

ಮಾನಸಿಕ ಅಸ್ವಸ್ಥನಾಗಿದ್ದನಾ ಸತ್ಯಪ್ಪಾ..?

ಯೋಧ ಸತ್ಯಪ್ಪಾ BSFಗೆ ಸೇರಿ 13 ವರ್ಷವಾಗಿತ್ತು. ಮೃದು ಸ್ವಭಾವದವನಾಗಿದ್ದ ಇತ ಇತ್ತಿಚಿಗೆ ಹಣಕಾಸಿನ ಹಾಗೂ ವಯಕ್ತಿಕ ಕಾರಣಗಳಿಂದಾಗಿ ಮಾನಸಿಕವಾಗಿ ದುರ್ಬಲನಾಗಿದ್ದ. ಸತ್ಯಪ್ಪ ಮೂರು ತಿಂಗಳ ಹಿಂದಷ್ಟೇ ಒಂದು ತಿಂಗಳ ಮಟ್ಟಿಗೆ ರಜೆ ಮೇಲೆ ಬಂದಿದ್ದನು. ನಂತರ ಮಾನಸಿಕ ಅಸ್ವಸ್ಥತೆ ಕಂಡು ಬಂದ ಹಿನ್ನಲೆಯಲ್ಲಿ ಈತ ರಜೆ ಮುಗಿದರೂ ಮರಳಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಅದಕ್ಕಾಗಿ ಇತನಿಗೆ ಮನೆಯವರು ಬೆಳಗಾವಿಯಲ್ಲಿ ಕೇಲ ದಿನಗಳ ಕಾಲ ಹಾಗೂ ಧಾರವಾಡದಲ್ಲಿನ ಮಾನಸಿಕ ಆರೋಗ್ಯ ಸಂಸ್ಥೆಯಲ್ಲಿ (ಡಿಮ್ಹಾನ್ಸ್) 5 ದಿನಗಳ ಕಾಲ ಚಿಕಿತ್ಸೆ ಕೊಡಿಸಿದ್ದರು. ನಂತರ ಪತ್ನಿ ಮತ್ತು ಮಕ್ಕಳೊಂದಿಗೆ ಕರ್ತವ್ಯಕ್ಕೆ ಮರಳಿದ್ದ ಯೋಧ ಸತ್ಯಪ್ಪನಿಗೆ ಅಧಿಕಾರಿಗಳು ಕ್ಯಾಂಪಿನಲ್ಲಿ   ಕುಟುಂಬದೊಂದಿಗೆ ಇರಲು ಪರವಾನಿಗೆ ನೀಡಿರಲಿಲ್ಲ. ಹೀಗಾಗಿ ಅವರನ್ನು ಊರಿಗೆ ಕಳುಹಿಸಿ ಮತ್ತೆ ಕರ್ತವ್ಯಕ್ಕೆ ವಾಪಸ್ ಹಾಜರಾಗಿದ್ದನು.

ಕುಟುಂಬ ಬಿಟ್ಟು ಏಕಾಂಗಿಯಾಗಿ ಇದ್ದಿದ್ದರಿಂದ ಆತನ ಮಾನಸಿಕ ಅಸ್ವಸ್ಥತೆ ಮತ್ತಷ್ಟು ಹದಿಗೆಟ್ಟು ಬಹುಶಃ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಸತ್ಯಪ್ಪ ಗುಂಡಿನ ದಾಳಿ ನಡೆಸಿರುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಆತನ ಸಂಬಂಧಿಕರಿಗೆ ಆತನ ಬಟಾಲಿಯನ್ ಕಡೆಯವರಿಂದ ಬಂದ ಮಾಹಿತಿಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ನಾಳೆ , ನಾಡಿದ್ದು ಯೋಧನ ಶವ ಬೆಳಗಾವಿಗೆ ಬಂದಮೇಲೆ ಎಲ್ಲದಕ್ಕೂ ಸ್ಪಷ್ಟ ಚಿತ್ರಣ ಸಿಗಲಿದೆ.

ಮೃತ ಯೋಧನಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರ,  ಸಹೋದರ, ಸಹೋದರಿ ಇದ್ದಾರೆ.