ಕಮರ್ಷಿಯಲ್ ಆಗುತ್ತಿದೆ ಅಗಸಗಿ-ಕಡೋಲಿ ಕೃಷಿ ಭೂಮಿ ..!
ಪಾಳು ಬೀಳುತ್ತಿರುವ ಹೊನಗಾ, ಮಚ್ಚೆ, ಕಿತ್ತೂರು ಸೇರಿ ಮತ್ತಿತರ ಕೈಗಾರಿಕಾ ಜಮೀನು..! ಚಿಲ್ಲರೆ ಕಾಸಿಗಾಗಿ ಮುಗ್ದ ಹಳ್ಳಿಗರೊಂದಿಗೆ ಚೆಲ್ಲಾಟ ಆಡುತ್ತಿರುವ PDO & ತಲಾಠಿಗಳು..?

ನಿಲ್ಲದ ಡಿಸಿ, ಎಸಿ, ತಹಶಿಲ್ದಾರ ಹೆಸರಿನಲ್ಲಿ ಲೂಟಿ..!
ಜನಜೀವಾಳ ಜಾಲ ಬೆಳಗಾವಿ: ಸರ್ಕಾರ ಕೃಷಿ ಭೂಮಿಯಲ್ಲಿ ಕೃಷಿ ಹೊರೆತು ಪಡಿಸಿ ಯಾವುದೇ ರೀತಿಯ ಚಟುವಟಿಕೆ ನಡೆಸಬಾರದು. ಒಂದು ವೇಳೆ ಕೃಷಿಯೆತರ ಚಟುವಟಿಕೆ ನಡೆಸುವುದಾದರೆ ಆ ಭೂಮಿಯನ್ನು ಕೈಗಾರಿಕೆ, ವಾಸ್ತವ್ಯ ಮತ್ತು ವಾಣಿಜ್ಯ ಕ್ಕೆ ಪರಿವರ್ತನೆ ಮಾಡಿ ನಡೆಸಬೇಕು. ಆದರೆ ಇಂತಹ ಯಾವುದೇ NA ಗಳನ್ನು ಮಾಡಿಸದೆ ಕಾನೂನು ಬಾಹಿರವಾಗಿ ಕೃಷಿ ಭೂಮಿಯಲ್ಲಿ ಕೈಗಾರಿಕೆ, ವಾಣಿಜ್ಯ ಮತ್ತು ಸಂಕೀರ್ಣಗಳು ಸೇರಿದಂತೆ ಅನೇಕ ರೀತಿಯ ಕೃಷಿಯೇತರ ಚಟುವಟಿಕೆಗಳನ್ನು ಬೆಳಗಾವಿ ನಗರದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮಗಳಲ್ಲಿ ಅವ್ಯಾಹತವಾಗಿ ನಡೆಸಲಾಗುತ್ತಿದೆ. ಇಷ್ಟೇಲ್ಲಾ ಆದರೂ ಕಂದಾಯ ಇಲಾಖೆಯವರು ಮಾತ್ರ ಕಣ್ಮಚ್ಚಿ ಕುಳಿತ್ತಿದ್ದಾರೆ. ಯಾಕೆಂದರೆ ಬೆಳಗಾವಿ ತಾಲೂಕಿನಲ್ಲಿ ನೂರಾರು ಎಕರೆಯಷ್ಟು ಜಮೀನಿನಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇದನ್ನು ನೋಡಿದರೆ ಕಂದಾಯ ಇಲಾಖೆಯವರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಮೂಡುತ್ತಿವೆ.
ಸರ್ಕಾರಕ್ಕೆ ಕೋಟ್ಯಾಂತರ ರೂ ನಷ್ಟ..!
ಸರ್ಕಾರ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿ ನಿರುದ್ಯೋಗ ಮತ್ತು ತಂತ್ರಜ್ಞಾನ ಹೆಚ್ಚಿಸಲು ಕೋಟ್ಯಾಂತರ ರೂ ಖರ್ಚು ಮಾಡಿ ರೈತರಿಂದ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಕೈಗಾರಿಕೆ ಅಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪನೆ ಮಾಡಿದೆ. ಆದರೆ ಅಲ್ಲಿನ ತೆರಿಗೆ ತಪ್ಪಿಸಲು ಮತ್ತು ನಿಯಮ ಬಾಹಿರ ಚಟುವಟಿಕೆ ನಡೆಸಲು ಉದ್ಯಮಿಗಳು ಗ್ರಾಮಗಳಿಗೆ ಬಂದು ರೈತರಿಗೆ ಹಣದ ಆಮಿಷ ತೋರಿಸುತ್ತಿದ್ದಾರೆ. ಅವರಿಂದ ಕೃಷಿ ಭೂಮಿಗಳನ್ನು ಹತ್ತಾರು ವರ್ಷಗಳವರೆಗೆ ಲೀಸ್ ಮೇಲೆ ಪಡೆದು ಕೈಗಾರಿಕೆಗಳನ್ನು ಮಾಡಿತ್ತಿದ್ದಾರೆ. ಇದರಿಂದ ಅಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ ಮತ್ತು ಭೂಮಾಲಿನ್ಯ ಮಾಡಿ ಹೋಗುತ್ತಿದ್ದಾರೆ. ಹೀಗಾಗಿ ಹಳ್ಳಿಯ ಜನ ನಿರುದ್ಯೋಗ ಮತ್ತು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ.
ಚಿಲ್ಲರೆ ಕಾಸಿಗಾಗಿ ಹಳ್ಳಿಯ ಜನರೊಂದಿಗೆ ಚೆಲ್ಲಾಟವಾಡುತ್ತಿರುವ PDO ಮತ್ತು ತಲಾಠಿಗಳು....
ಕಂದಾಯ ಇಲಾಖೆಗೆ ಒಳಪಡುವ ಭೂಮಿಯಲ್ಲಿ ಯಾವುದೇ ರೀತಿಯ ಕೃಷಿ ಬಾಹಿರ ಚಟುವಟಿಕೆ ನಡೆದರೆ ಅವುಗಳನ್ನು ಅಲ್ಲಿನ ತಲಾಠಿ(ಗ್ರಾಮ ಲೆಕ್ಕಾಧಿಕಾರಿ) ಗಳು ತಡೆದು ಕ್ರಮ ಕೈಗೊಳ್ಳಬೇಕು. ಹಾಗೇಯೇ ಪಂಚಾಯಿತಿ ಹದ್ದಿನಲ್ಲಿ ಇಂತಹ ಚಟುವಟಿಕೆ ನಡೆಸಲು ಅಲ್ಲಿನ ಗ್ರಾ ಪಂ ಅನುಮತಿ ಕೊಡಬೇಕಾದರೆ ಕಾನೂನಿನ ಪ್ರಕಾರ ನಿಯಮಗಳನ್ನು ಪಾಲಿಸಿದಾಗ ಮಾತ್ರ ನೀಡಬೇಕು. ಆದರೆ PDO & ತಲಾಠಿಗಳು ಚಿಲ್ಲರೆ ಕಾಸಿಗಾಗಿ ಇಂತಹ ಅನಧಿಕೃತ ಮತ್ತು ಕಾನೂನು ಬಾಹಿರ,ಕೈಗಾರಿಕೆ ಕಟ್ಟಡ ಮತ್ತು ಹಲವು ಚಟುವಟಿಕೆಗಳಿಗೆ ಅನುಮತಿ ನೀಡಿ ಹಳ್ಳಿ ಜನರ ಜೀವನವನ್ನು ಹಳ್ಳ ಹಿಡಿಯುವಂತೆ ಮಾಡುತ್ತಿದ್ದಾರೆ.
ಡಿಸಿ, ಎಸಿ, ತಹಶೀಲ್ದಾರ ಹೆಸರಿನಲ್ಲಿ ಲೂಟಿ..!
ಅದಲ್ಲದೆ ಇಂತಹ ಕಾನೂನು ಬಾಹಿರ ಚಟುವಟಿಕೆ ನಡೆಸಲು ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ನಡುವಿನ ದಲ್ಲಾಳಿಗಳು DC, AC ಹಾಗೂ ತಹಶೀಲ್ದಾರ ಹೆಸರಿನಲ್ಲಿ ಲೂಟಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಒಂದು ವೇಳೆ ಇಂತಹದ್ದೆ ಮುಂದುವರಿದರೆ ಸರ್ಕಾರ ಬಳಿ ಪಹಣಿ ಪತ್ರಿಕೆಗಳಲ್ಲಿ ಮಾತ್ರ ಜಮೀನು ನೋಡಬೇಕಾದ ಪರಿಸ್ಥಿತಿ ಎದುರಾಗಬಹುದು ಎನ್ನುವುದರಲ್ಲಿ ಸಂಶಯವಿಲ್ಲ.