BREAKING NEWS  SSLC ಪರೀಕ್ಷೆ ಫಲಿತಾಂಶ ಘೋಷಣೆ ; ಬೆಳಗಾವಿ, ಚಿಕ್ಕೋಡಿ ಎಷ್ಟನೇ ಸ್ಥಾನ ಗೊತ್ತೇ ?

BREAKING NEWS  SSLC ಪರೀಕ್ಷೆ ಫಲಿತಾಂಶ ಘೋಷಣೆ ; ಬೆಳಗಾವಿ, ಚಿಕ್ಕೋಡಿ ಎಷ್ಟನೇ ಸ್ಥಾನ ಗೊತ್ತೇ ?
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಂಗಳೂರು :
ವಿದ್ಯಾರ್ಥಿ ಜೀವನದ ಮಹತ್ವದ ಕಾಲಘಟ್ಟ ಎನಿಸಿರುವ ಎಸ್ಸೆಸ್ಸೆಲ್ಸಿ ಫಲಿತಾಂಶ ಕೊನೆಗೂ ಪ್ರಕಟಗೊಂಡಿದೆ. ಗುರುವಾರ ಮಧ್ಯಾಹ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಬಿ. ಸಿ. ನಾಗೇಶ್ ಅವರು ಮಲ್ಲೇಶ್ವರಂದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಶೈಕ್ಷಣಿಕವಾಗಿ ಬೆಳಗಾವಿ ಜಿಲ್ಲೆಯನ್ನು ಬೆಳಗಾವಿ ಶೈಕ್ಷಣಿಕ ಜಿಲ್ಲೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಎಂದು ವಿಂಗಡಿಸಲಾಗಿದೆ. 

ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳು ಎ ಗ್ರೇಡ್ ನಲ್ಲಿ ಸಾಧನೆ ಮಾಡಿವೆ.

ರಾಜ್ಯದಲ್ಲಿ ಈ ಸಲ ಒಟ್ಟು 7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
85.53 ಒಟ್ಟಾರೆ ಫಲಿತಾಂಶವಾಗಿದೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಕಳೆದ ಹತ್ತು ವರ್ಷದಲ್ಲೇ ದಾಖಲೆ ಫಲಿತಾಂಶ ಈ ಬಾರಿ ಆಗಿದೆ ಎಂದು ಸಚಿವ ನಾಗೇಶ್ ಸ್ಪಷ್ಟಪಡಿಸಿದರು.


ಈ ಬಾರಿ ಯಾವುದೇ ಜಿಲ್ಲೆಗಳಿಗೆ ರ್ಯಾಂಕ್ ಘೋಷಣೆ ಮಾಡಿಲ್ಲ. ಬೆಂಗಳೂರು ಸೌತ್ ಹಾಗೂ ಯಾದಗಿರಿ ಜಿಲ್ಲೆಗಳು ಬಿ ಗ್ರೇಡ್ ನಲ್ಲಿ ಕಾಣಿಸಿಕೊಂಡಿದ್ದು ಉಳಿದ ಮೂವತ್ತೆರಡು ಶೈಕ್ಷಣಿಕ ಜಿಲ್ಲೆಗಳು ಎ ಗ್ರೇಡ್ ನಲ್ಲಿ ಫಲಿತಾಂಶ ದಾಖಲು ಮಾಡಿವೆ ಎಂದು ಸಚಿವರು ತಿಳಿಸಿದರು. ಒಟ್ಟು 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.

ಅಭಿನಂದನೆ :
ಬೆಳಗಾವಿ ಶೈಕ್ಷಣಿಕ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ವಿಶೇಷ ಸಾಧನೆ ಮಾಡಿರುವುದನ್ನು ಡಿಡಿಪಿಐ ಬಸವರಾಜ ನಾಲತವಾಡ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳು ಜಿಲ್ಲೆಗೆ ಕೀರ್ತಿ ತಂದಿರುವುದು ಅಭಿನಂದನೀಯ. ಮುಂದಿನ ದಿನಗಳಲ್ಲೂ ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರುವಂತೆ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.