2023 ಕ್ಕೆ ಯಮಕನಮರಡಿಯಲ್ಲಿ ಬಿಜೆಪಿ ಬಾವುಟ ; ಮಾರುತಿ ಅಷ್ಟಗಿ

2023 ಕ್ಕೆ ಯಮಕನಮರಡಿಯಲ್ಲಿ ಬಿಜೆಪಿ ಬಾವುಟ ; ಮಾರುತಿ ಅಷ್ಟಗಿ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

2023 ರಲ್ಲಿ ಯಮಕನಮರಡಿಯಲ್ಲಿ ಬಿಜೆಪಿ ಬಾವುಟ ..!

ನಿಗಮ ಅಧ್ಯಕ್ಷದಿಂದ ಜವಾಬ್ದಾರಿ ದುಪ್ಪಟ್ಟಾಗಿದೆ; ಮಾರುತಿ ಅಷ್ಟಗಿ

ಬೆಳಗಾವಿ: ಬಿಜೆಪಿ ಪಾಳಯದಲ್ಲಿ ಅಚ್ಚರಿ ಮೂಡಿಸುವಂತೆ ಇತ್ತೀಚಿಗೆ ಯಮಕನಮರಡಿ ಮತಕ್ಷೇತ್ರದ ಮುಖಂಡ ಮಾರುತಿ ಅಷ್ಟಗಿಗೆ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂತಸಗೊಂಡು ಅವರಿಗೆ ಸನ್ಮಾನ ಮಾಡುತ್ತಿದ್ದು, ಇಂದು ಬೆಳಗಾವಿ ತಾಲೂಕಿನ ಅಗಸಗಿ, ಚಲವೇನಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸನ್ಮಾನ ಮಾಡಿದರು.

ಈ ವೇಳೆ ಸನ್ಮಾನ ಸ್ವಿಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಟಗಿ ಮುಂಬರುವ 2023 ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ  ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ನನಗೆ ಈ ಜವಾಬ್ದಾರಿ ನೀಡಲಾಗಿದೆ. ಆದ್ದರಿಂದ ನಾವೆಲ್ಲರೂ ಸೇರಿ ಪಕ್ಷದ ಆದೇಶದಂತೆ ಕೆಲಸ ಮಾಡಿ ಬಿಜೆಪಿಯನ್ನು ಅಧಿಕಾರ ತರುವಲ್ಲಿ ನಿಸ್ವಾರ್ಥವಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. 

ಈ ವೇಳೆ ಗ್ರಾಮಸ್ಥರು ಅಷ್ಟಗಿ ಮುಂದೆ ತಮ್ಮ ಸಮಸ್ಯೆಗಳನ್ನು ತೊಡಗಿಕೊಂಡರು. ಇದಕ್ಕೆ ಸ್ಪಂದಿಸಿದ ಅವರು ಕ್ಷೇತ್ರದಲ್ಲಿನ ಪಿಡಿಓ ಹಾಗೂ ಅಧಿಕಾರಿಗಳಿಗೆ ಕರೆ ಮಾಡಿ ನೀವು ಒಂದು ಪಕ್ಷದ ಜನಪ್ರತಿನಿಧಿಗಳಿಗೆ ತಲೆಬಾಗಿ ಕೆಲಸ ಮಾಡಬಾರದು. ಜನರ ಧ್ವನಿಯಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಇಲ್ಲದಿದ್ದರೆ ನಿಮ್ಮ ವಿರುಧ್ಧ ಸರಕಾರ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ ಪಾಟೀಲ, ವಿನಾಯಕ ರೆಡೆಕರ, ವಿಠ್ಠಲ ಕೋಳಿ, ಲಗಮಾ ಸನದಿ,  ನಿರಂಜನ ಹಾಲೇನ್ನವರ, ವಿನಾಯಕ, ಅನ್ನಪ್ಪಾ ಪಾಟೀಲ ಸೇರಿದಂತೆ ಗ್ರಾಮದ ಹಿರಿಯರು  ಉಪಸ್ಥಿತರಿದ್ದರು.