ಬೆಳಗಾವಿಯಲ್ಲಿ ಪೊಲೀಸರಿಂದ ಸಾರ್ವಜನಿಕರ ಮೇಲೆ ಹಲ್ಲೆ ! 

ಬೆಳಗಾವಿಯಲ್ಲಿ ಪೊಲೀಸರಿಂದ ಸಾರ್ವಜನಿಕರ ಮೇಲೆ ಹಲ್ಲೆ ! 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಸಂಚಾರಿ ಪೋಲಿಸರು ದಾಖಲೆ ಪರಿಶೀಲನೆ ನೆಪದಲ್ಲಿ ವಾಹನ ತಡೆಯುವಂತಿಲ್ಲ ಎಂದು ರಾಜ್ಯದ ಡಿಜಿ, ಐಜಿಪಿ ಸ್ವತಃ ಆದೇಶ ಹೊರಡಿಸಿದ್ದರು. ಆದರೆ ಬೆಳಗಾವಿಯಲ್ಲಿ ಸಂಚಾರಿ ಪೊಲೀಸರು ಮುಖ್ಯರಸ್ತೆ ಬಿಟ್ಟು     
ಜನ ಓಡಾಡುವ ರಸ್ತೆಯಲ್ಲಿ ನಿಂತು ವಾಹನ ಸವಾರರನ್ನು ತಡೆದು ಥಳಿಸುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಬೆಳಗಾವಿ :
ಇನ್ನು ಮುಂದೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ಏಕಾಏಕಿ ತಡೆದು ದಾಖಲೆ ಪರಿಶೀಲನೆ ಮಾಡುವಂತಿಲ್ಲ ಎಂದು ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್ ನಿನ್ನೆಯಷ್ಟೇ ಸೂಚನೆ ನೀಡಿದ್ದರು. ದಾಖಲೆ ಪರಿಶೀಲನೆ ನೆಪದಲ್ಲಿ ವಾಹನ ತಡೆಯುವಂತಿಲ್ಲ, ಕೇವಲ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರ ವಾಹನಗಳನ್ನು ತಡೆಯಬಹುದು, ಎಲ್ಲೆಂದರಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಡೆದು ದಾಖಲೆ ಪರಿಶೀಲನೆ ಮಾಡುವಂತಿಲ್ಲ ಎಂದು ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಡಿಜಿ, ಐಜಿಪಿ ಆದೇಶ ಹೊರಡಿಸಿದ್ದರು.

ಇದರ ಬೆನ್ನಲ್ಲೇ ಇಂದು ಬೆಳಗಾವಿಯಲ್ಲಿ ಪೋಲೀಸರು ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬೆಳಗಾವಿಯ ಕೇಳ್ಕರ್ ಬಾಗ್ ನಂದಿನಿ ಹಾಲಿನ ಅಂಗಡಿ ಹಾಗೂ ದತ್ತ ಮಂದಿರ ಬಳಿ  ಮಾರ್ಗದಲ್ಲಿ ಸವಾರರು ಎಂದಿನಂತೆ ವಾಹನ ತೆಗೆದುಕೊಂಡು ಓಡಾಡುತ್ತಿದ್ದರು. ಆದರೆ, ಪೊಲೀಸರು ಆ ಮಾರ್ಗವಾಗಿ ಬರುವ ವಾಹನಗಳನ್ನು ತಡೆದು ದಾಖಲೆ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಕೆಲ ವಾಹನ ಸವಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಅಹಿತಕರ ಘಟನೆ ನಡೆದಿದೆ. ಹಲ್ಲೆ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು ಪೊಲೀಸರ ನಡೆಗೆ  ಸಾರ್ವಜನಿಕರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಸ್ವತಃ ಡಿಜಿ, ಐಜಿಪಿಯೇ ವಾಹನಗಳನ್ನು ಎಲ್ಲೆಡೆ ತಡೆದು ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಆದರೆ ಬೆಳಗಾವಿಗೆ ಇದು ಅನ್ವಯವಾಗುವುದಿಲ್ಲವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.