ಧಾರವಾಡ AC ಆಗಿ ಅಶೋಕ ತೇಲಿ ನೇಮಕ..! ಕುಂದಾನಗರಿಯಿಂದ ಪೇಡಾನಗರಿಗೆ ಹೋದ ಡೈನಾಮಿಕ್ ಯುವ ಅಧಿಕಾರಿ..!

ಧಾರವಾಡ AC ಆಗಿ ಅಶೋಕ ತೇಲಿ ನೇಮಕ..!  ಕುಂದಾನಗರಿಯಿಂದ ಪೇಡಾನಗರಿಗೆ ಹೋದ ಡೈನಾಮಿಕ್ ಯುವ ಅಧಿಕಾರಿ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಜನ ಜೀವಾಳ ಜಾಲ ಧಾರವಾಡ ಬೆಳಗಾವಿ : ಬೆಳಗಾವಿ ಉಪವಿಭಾಗಧಿಕಾರಿಯಾಗಿ ನಿಷ್ಠಾವಂತ ಮತ್ತು ಕ್ರಿಯಾಶೀಲ ಅಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದ ಕೆಎಎಸ್ ಅಧಿಕಾರಿ ಅಶೋಕ ತೇಲಿ ಅವರನ್ನು ಧಾರವಾಡ ಜಿಲ್ಲಾ ಉಪವಿಭಾಗಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

ಬೆಳಗಾವಿಯಲ್ಲಿ ಕ್ರಾಂತಿ ಮಾಡಿದ್ದ ತೇಲಿ..!

ಬೆಳಗಾವಿ ಎಸಿಯಾಗಿ ಅಧಿಕಾರಿ ಸ್ವಿಕರಿಸಿದ ನಂತರ ತೇಲಿ ಅವರು ಕಂದಾಯ ಇಲಾಖೆಯಲ್ಲಿನ ಸೋಮಾರಿಗಳಿಗೆ ಚುರುಕು ಮುಟ್ಟಿಸಿ ಹಲವು ವಿಭಾಗಗಳಲ್ಲಿ ಹೊಸತನ ತಂದು ಕಾರ್ಯ ನಿರ್ವಹಿಸಿದ್ದರು. ಇನ್ನೂ ವರ್ಷಗಳಿಂದ ಜಿಡ್ಡು ಹಿಡಿದಿದ್ದ ಭೂಮಿ ಇಲಾಖೆಗೆ ಹೊಸ ಸ್ಪರ್ಶ ನೀಡಿ ರಾಜ್ಯದಲ್ಲಿ ಬೆಳಗಾವಿ ವಿಭಾಗವನ್ನು ಉನ್ನತ ಸ್ಥಾನಕ್ಕೆ ತಂದಿದ್ದರು. 

ಯುವ ಮತ್ತು ಕ್ರಿಯಾಶೀಲ ಅಧಿಕಾರಿ ಆಗಿರುವ ಅಶೋಕ ತೇಲಿ ಅವರಿಂದ ಧಾರವಾಡ ಜನ ಬದಲಾವಣೆ ಗಾಳಿಯ ನಿರೀಕ್ಷೆಯಲ್ಲಿದ್ದಾರೆ.