ದರ್ಪ- ಬಲಪ್ರಯೋಗದ ಸರಕಾರ; ಶಾಸಕರು : ಆಮ್ ಆದ್ಮಿ

ದರ್ಪ- ಬಲಪ್ರಯೋಗದ ಸರಕಾರ; ಶಾಸಕರು : ಆಮ್ ಆದ್ಮಿ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ:ಸಬ್ ಕಾ ಸಾಥ್ ಎಂದು ಹೇಳಿ ಸರಕಾರ ರೈತರ ಮೇಲೆ ದರ್ಪ ತೋರುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ಸರಕಾರದ ವಿರುದ್ಧ ಗುಡುಗಿದರು.

40% ಸರಕಾರ ಎಂಬ ಅವಮಾನ ಹೊತ್ತು ಇಂದು ಮುಖ್ಯಮಂತ್ರಿ ಬೊಮ್ಮಾಯಿ ಇಂದು ತಿರುಗಾಡುತ್ತಿದ್ದಾರೆ. ಹೊರ ರಾಜ್ಯದವರು ಬೊಮ್ಮಾಯಿ ಅವರನ್ನು 40% ಸರಕಾರ  ಎಂದು ಪೋಸ್ಟರ್ ಮೂಲಕ ಅಣುಕಿಸಲಾಗುತ್ತಿದೆ.

ಬೆಳಗಾವಿ ದಕ್ಷಿಣ ಶಾಸಕನ ಭ್ರಷ್ಟಾಚಾರವನ್ನು ಶಾಸನಸಭೆಯೇ ಎತ್ತಿ ಹಿಡಿದಿದೆ. ಎಸಿಬಿ ಮತ್ತು ಲೋಕಾಯುಕ್ತರಿಗೆ ಪ್ರಾಶಿಕ್ಯೂಶನ್ ಗೆ ಅನುಮತಿ ಕೊಡದೇ ಸ್ವತಃ ಸರಕಾರವೇ ಭ್ರಷ್ಟಾಚಾರಿ ಶಾಸಕನಿಗೆ ಸಹಕಾರ ಮಾಡುತ್ತಿದೆ ಎಂದರು.
ಇಡಿ, ಸಿಬಿಐ ಬಿಟ್ಟು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕನ ಮೇಲೆ ಬಿಟ್ಟು ತನಿಖೆ ಮಾಡಿಸಿ ಎಂದು ಕೇಂದ್ರ ಸರಕಾರ ತನಿಖೆ ಮಾಡಿಸಲಿ. 

ಅಧಿಕಾರಿ ವರ್ಗ, ಜನಸಾಮಾನ್ಯರೊಂದಿಗೆ ಇಲ್ಲಿನ‌ ದಕ್ಷಿಣ ಶಾಸಕ ಅಭಯ ಪಾಟೀಲ ನಡೆದುಕೊಳ್ಳುವ ರೀತಿ ನೀತಿ ಎಲ್ಲರಿಗೂ ತಿಳಿದ ವಿಷಯ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆದ ಅಪರಿಮಿತ ಭ್ರಷ್ಟಾಚಾರ ನಡೆದಿದ್ದು, ತೀವ್ರವಾಗಿ ಸರಕಾರ ತನಿಖೆ  ನಡೆಸಬೇಕು ಎಂದರು.

ಸಕ್ಕರೆ ಜಿಲ್ಲೆಯ ರೈತರಿಗೆ ಕಬ್ಬಿನ‌ ಪೇಮೆಂಟ್ ಕೊಡುವ ವಿಷಯದಲ್ಲಿ ಆಲ್ ಪಾರ್ಟಿ ಸ್ಕ್ಯಾಮ್ ನಡೆದಿದೆ. ಬೇರೆ ರಾಜ್ಯಗಳಲ್ಲಿ ಬೈಪ್ರಾಡಕ್ಟ್ ಇಲ್ಲದಿದ್ದರೂ ಅಲ್ಲಿನ‌ ರೈತರಿಗೆ ಪ್ರತಿ ಟನ್ ಗೆ ಉತ್ತಮ‌ಬೆಲೆ ಸಿಗುತ್ತಿದೆ. ಆದ್ರೆ ಬೆಳಗಾವಿಯಲ್ಲಿ ಮಾತ್ರ ರೈತರ ಮೇಲೆ ಸರಕಾರ ಮತ್ತು ಕಾರ್ಖಾನೆಗಳ ದರ್ಪ ನಡೆದಿದೆ ಎಂದರು. 40 ವರ್ಷದ ಭೂಸ್ವಾಧೀನ ಬೆಲೆಯಲ್ಲಿಯೇ ರೈತರ ಭೂಸ್ವಾಧೀನ‌ ಸರಕಾರ ದರ್ಪದಿಂದ, ಬಲಪ್ರಯೋಗದಿಂದ ಮಾಡಿಕೊಳ್ಳುತ್ತಿದೆ ಎಂದರು.

ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ಜನರ ಸೇವೆ ಬಗ್ಗೆ ಇಲ್ಲದ ಮನಸ್ಸಿನಿಂದ ಇಲ್ಲಿನ ಪ್ರದೇಶಗಳು ಅಭಿವೃದ್ಧಿ ಆಗಿಲ್ಲ. ದಕ್ಷಿಣ ಕರ್ನಾಟಕದ ರಾಜಕಾರಣಿಗಳಲ್ಲಿ ಒಗ್ಗಟ್ಟು  ಇದೆ ಮತ್ತು ಸರಕಾರದಿಂದ ಚಾಕಚಕ್ಯತೆಯಿಂದ ಅನುದಾನ ಪಡೆಯುವ ಶಕ್ತಿ ಇದೆ. ಆದ್ರೆ ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ಎಲ್ಲಿದೆ ಮನಸ್ಸು ಸ್ವಾಮಿ ಇದೇರಿ? ಎಂದು ಪ್ರಶ್ನಿಸಿದರು.

ರಾಜು ಟೋಪಣ್ಣವರ ಮಾತನಾಡಿ, ಬೆಳಗಾವಿ ಸ್ಮಾರ್ಟ್ ಸಿಟಿ ಭ್ರಷ್ಟಾಚಾರ ನಡೆಯಲು ಬೆಳಗಾವಿಯ ಉತ್ತರ ದಕ್ಷಿಣ ಶಾಸಕರು ಹಾಗೂ ಸ್ಥಳೀಯ ಸಂಸದರ ನೇರ ಕೈ ಕಾರಣ ಎಂದರು.ರಾಜು ಟೋಪಣ್ಣವರ, ವಿಜಯಶಾಸ್ತ್ರೀಮಠ ಮತ್ತಿತರರು ಉಪಸ್ಥಿತರಿದ್ದರು.