ಪಿಎಂ ಮೋದಿ ಜನ್ಮದಿನ ಅಂಗವಾಗಿ ಕೆಎಲ್ ಇ ಸಂಸ್ಥೆಯಿಂದ ಅರ್ಥಪೂರ್ಣ ಕಾರ್ಯಕ್ರಮ 

ಪಿಎಂ ಮೋದಿ ಜನ್ಮದಿನ ಅಂಗವಾಗಿ ಕೆಎಲ್ ಇ ಸಂಸ್ಥೆಯಿಂದ ಅರ್ಥಪೂರ್ಣ ಕಾರ್ಯಕ್ರಮ 
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಬೆಳಗಾವಿ :

ದೇಶದ ಸ್ವಾತಂತ್ರ್ಯ ಮಹೋತ್ಸವದ
ಅಮೃತ ಮಹೋತ್ಸವ ಹಾಗೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ರಕ್ತ ಭಂಡಾರವು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸೆ.17 ರಿಂದ  ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
 17 ರಂದು ಆರ್ ಎಲ್ ವಿಜ್ಞಾನ ಮಹಾವಿದ್ಯಾಲಯ, ಬೈಲಹೊಂಗಲದ ಕೆಆರ್ ಸಿ ಮಹಾವಿದ್ಯಾಲಯ, ಟೆನಿಸ್ ಕ್ರೀಡಾಳುಗಳು ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ. 18 ರಂದು ನಗರದ ಕೊನವಾಳ ಗಲ್ಲಿಯ ಆರೋಗ್ಯ ಭಾರತಿ ಸಂಸ್ಥೆ, 22 ರಂದು ಚಿಕ್ಕೋಡಿಯ ಬಿ ಕೆ ಮಹಾವಿದ್ಯಾಲಯ, 29 ರಂದು ಮುದ್ದಾಪೂರದ ಜೆ ಕೆ ಸಿಮೆಂಟ ಹಾಗೂ ಅ.1 ಅಕ್ಟೋಬರ ರಂದು ಚಂದಗಡ ತಾಲೂಕಿನ ಕೋವಾಡ ಗ್ರಾಮದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಆದ್ದರಿಂದ ಆಸಕ್ತರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಅವರು ಕೋರಿದ್ದಾರೆ.