ಸ್ಮಶಾನ ಹತ್ತಿರ ಇಸ್ಪೀಟ್ ಆಡುತ್ತಿದ್ದ 9 ಜನರ ಬಂಧನ..!

ಸ್ಮಶಾನ ಹತ್ತಿರ ಇಸ್ಪೀಟ್ ಆಡುತ್ತಿದ್ದ 9 ಜನರ ಬಂಧನ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಸ್ಮಶಾನ ಹತ್ತಿರ ಇಸ್ಪೀಟ್ ಆಡುತ್ತಿದ್ದ 9 ಜನರ ಬಂಧನ..!

ಕಾಕತಿ ಪೊಲೀಸರಿಂದ ಕಾರ್ಯಾಚರಣೆ..!

ಬೆಳಗಾವಿ : ತಾಲೂಕಿನ ಬಿ ಕೆ ಕಂಗ್ರಾಳಿ ಗ್ರಾಮದ ಸಾರ್ವಜನಿಕ ಸ್ಮಶಾನ ಹತ್ತಿರ ಇಸ್ಪೀಟೆಲೆಗಳ ಮೇಲೆ ಹಣ ಕಟ್ಟಿ ಗ್ಯಾಂಬ್ಲಿಂಗ್ ಆಟದಲ್ಲಿ ತೊಡಗಿದ್ದ 9 ಜನರನ್ನು ಕಾಕತಿ ಪಿಐ ಐ ಎಸ್ ಗುರುನಾಥ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿ ಸಾವಿರಾರು ರೂ ವಶಪಡಿಸಿಕೊಂಡಿದ್ದಾರೆ.

ಬಿಕೆ ಕಂಗ್ರಾಳಿ ಗ್ರಾಮದ ಹಾಗೂ ವ್ಯಾಪ್ತಿಯಲ್ಲಿನವರಾದ ....

೧.ಬಾಲರಾಜ ಗಂಗಪ್ಪಾ ಹಳಬರ 
೨.ವಿಶ್ವನಾಥ ಹನಮಂತ ರಾಜಕಟ್ಟಿ
೩.ಶಂಕರ ಬಸವಣ್ಣಿ ನಾಯಿಕ
೪.ರಾಜು ನಿಂಗಪ್ಪಾ ಬೆಳಗಾವಿ
೫. ಹನಮಂತ ಭರಮಪ್ಪಾ ಕೊಡಗಾ
೬.ಮಂಜುನಾಥ ಬಸ್ಸಪ್ಪಾ ತಳವಾರ
೭.ಜ್ಯೋತಿಭಾ ಸತ್ಯಪ್ಪಾ ಯಳಲ್ಲಿ
೮.ರವಿ ಬಡಕಪ್ಪಾ ಗುಗಿಕೋಳ್ಳಾ
೯.ಕಿರಣ ಸತ್ಯಪ್ಪಾ ಬೂಡ್ರ್ಯಾನೂರ ಎಂಬುವರು ಬಂಧಿತ ಆರೋಪಿಗಳು.

ಬಂಧಿತರಿಂದ ರೂ.5390/- ನಗದು, ಇಸ್ಪೀಟೆಲೆಗಳ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ದಾಳಿಯಲ್ಲಿ ಪಿಎಸ್ಐ , ಸಿಬ್ಬಂದಿ ವಿರುಪಾಕ್ಷೀ ಮಾನಗಾಂವಿ, ಪ್ರಕಾಶ ಬಲ್ಲಾಳ, ಯಲ್ಲಪ್ಪಾ ಮುರಗಟ್ಟಿ, ಶಿವಾನಂದ ದಡ್ಡಿ  ಸೇರಿದಂತೆ ಇತರರು ಭಾಗಿಯಾಗಿದ್ದರು.