75ವರ್ಷಗಳ ಸೈದ್ಧಾಂತಿಕ ಪುನರ್ಮನನ ಆಗಸ್ಟ್. 3ಕ್ಕೆ

75ವರ್ಷಗಳ ಸೈದ್ಧಾಂತಿಕ ಪುನರ್ಮನನ ಆಗಸ್ಟ್. 3ಕ್ಕೆ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

* ಬೆಳಗಾವಿ ಜಿಲ್ಲೆಯಿಂದ 1ಲಕ್ಷ ಅಭಿಮಾನಿಗಳ ಆಗಮನ*

* ಸಿದ್ದರಾಮಯ್ಯ ಅಮೃತ ಮಹೋತ್ಸವ:ಅರವಿಂದ ದಳವಾಯಿ

ಜನ ಜೀವಾಳ ಜಾಲ ಬೆಳಗಾವಿ:ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರ ಧ್ವನಿ  ಎತ್ತುತ್ತ ನಾಲ್ಕು ದಶಕ ರಾಜಕೀಯ ಜೀವನ ಕಳೆದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75ನೇ ಜನ್ಮದಿನ ಈ ಭಾರಿ ಅಭಿಮಾನಿಗಳಿಂದ ವಿಶೇಷವಾಗಿ ಆಚರಿಸಲಾಗುತ್ತಿದೆ.

     ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ ಸಂಘಟನಾ ಕಾರ್ಯದರ್ಶಿ ಅರವಿಂದ ದಳವಾಯಿ ಕುರಿಗಾಹಿಯಾಗಿ, ನ್ಯಾಯವಾದಿಯಾಗಿ ರಾಜಕೀಯ ನೇತಾರನಾಗಿ ಬೆಳೆದುಬಂದ ಸಿದ್ದರಾಮಯ್ಯ ಅವರ ಹೋರಾಟದ ಹಾದಿಯ ನೆನಪಿಸುವ ಮಹೋತ್ಸವವಾಗಿ ಅವರ 75ನೇ ಜನ್ಮದಿನಾಚರಣೆ ಆ. 3ರಂದು ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ.

     ಯಾವುದೇ ರಾಜಕೀಯ ಪಕ್ಷ , ಜಾತಿ-ಧರ್ಮ, ವರ್ಗ ನಂಬಿಕೆಗಳಿಗೆ ಸೀಮಿತವಾಗದೇ ಅದರ ಆಚೆ ಈ ಬೃಹತ್ 'ಸಿದ್ದರಾಮಯ್ಯ ಅಮೃತ ಮಹೋತ್ಸವ' ಸಮಿತಿಯ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ನಡೆಯಲಿದೆ.

     ವಿರೋಧ ಪಕ್ಷಗಳ ಹೀಯಾಳಿಕೆಯಂತೆ ಇದು ಏಕವ್ಯಕ್ತಿ ಪ್ರತಿಷ್ಠೆಯ ಇಲ್ಲವೇ ಏಕವ್ಯಕ್ತಿ ವೈಭವೀಕರಣ ಮಾಡುವ ಮಹೋತ್ಸವವಲ್ಲ.

     ಇದು ಬಡವರು, ದೀನರು- ದಲಿತರು, ಅಲ್ಪಸಂಖ್ಯಾತರು, ಸಮಾಜದ ಕಟ್ಟಕಡೆಯ ಜನತೆ ಅಭಿಮಾನದಿಂದ ತಮ್ಮ ಖರ್ಚಿನಲ್ಲಿ ಆಯೋಜಿಸಿದ ಕಾರ್ಯಕ್ರಮವಾಗಿದೆ.

     ಜಾರ್ಜ್ ಫರ್ನಾಂಡಿಸ್, ಡಾ. ರಾಮಮನೋಹರ ಲೋಹಿಯಾ ತತ್ವ ಸಿದ್ಧಾಂತದ ಅಡಿ ಸಿದ್ದರಾಮಯ್ಯ ಅವರು ಕೆಳಹಂತದ ಜನರ ಬಗ್ಗೆ ಚಿಂತನೆ ನಡೆಸುತ್ತ ಬಂದಿದ್ದು ಬಡವರಿಗಾಗಿಯೇ ಅವರು ರಾಜಕೀಯ ಮೀಸಲಾತಿ, ಅನ್ನಭಾಗ್ಯ, ಕೃಷಿ ಭಾಗ್ಯ, ಉದ್ಯೋಗ ಮೀಸಲಾತಿ, 

     ಫ್ಯಾಸಿಸ್ಟ್, ಕೋಮುವಾದಿ, ಮತಿಯವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಸಿದ್ದರಾಮಯ್ಯ ಸಮಾಜವಾದಿ ತತ್ವದ ಮೇಲೆ ನಂಬಿಕೆ ಇಟ್ಟು ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯಾತೀತತೆ ಹಾಗೂ ಸಾಮಾಜಿಕ ಭಾತೃತ್ವ ಮೂಡಿಸಲುವಲ್ಲಿ ನಾಲ್ಕು ದಶಕ ರಾಜಕೀಯ ಮಾಡಿ ಸಮಾಜ ಸೇವೆ ಮಾಡಿದ್ದಾರೆ. 

     ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅರ್ಥಶಾಸ್ತ್ರಜ್ಞ, ಗಡಿ ಸಲಹಾ ಸಮಿತಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ ಹತ್ತು ಹಲವು ಹೋರಾಟ ಅವರ ಭತ್ತಳಿಕೆಕೆಯಲ್ಲಿ ಸೇರಿವೆ ಎಂದರು.

     ಬೆಳಗಾವಿ ಜಿಲ್ಲೆಯಿಂದ‌ ಕನಿಷ್ಠ 1 ಲಕ್ಷ ಜನ ದಾವಣಗೆರೆಗೆ ಆಗಮಿಸುವ ನಿರೀಕ್ಷೆ ಇದ್ದು ದಾವಣಗೆರೆಯಲ್ಲಿ 20ಲಕ್ಷ ಜನ ಸೇರಲಿದ್ದಾರೆ ಎಂದರು.

    ನಿವೃತ್ತ ಎಸ್ಪಿ ಅಶೋಕ ಸದಲಗೆ, ಸುರೇಶ ಮಗದುಮ, ಇಮಾಮಹುಸೇನ ಕುನ್ನೂರ, ಪ್ರಕಾಶ ಅರಳಿ, ವಿಠ್ಠಲ ಖಾನಟ್ಟಿ ಉಪಸ್ಥಿತರಿದ್ದರು.