ಹಳ್ಳದಲ್ಲಿ 7 ಭ್ರೂಣಪತ್ತೆ ; ಬೆಚ್ಚಿ ಬಿತ್ತು ಮೂಡಲಗಿ

ಹಳ್ಳದಲ್ಲಿ 7 ಭ್ರೂಣಪತ್ತೆ ; ಬೆಚ್ಚಿ ಬಿತ್ತು ಮೂಡಲಗಿ
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಈ ಮೊದಲು ಕೂಡ ಹಳ್ಳದಲ್ಲಿ ಭ್ರೂಣ ಪತ್ತೆಯಾಗಿದ್ದವು. ಈಗ ಮತ್ತೆ ಏಳು ಭ್ರೂಣ ಪತ್ತೆಯಾಗಿದ್ದು, ಮೂಡಲಗಿಯಲ್ಲಿ ಭ್ರೂಣಲಿಂಗ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.


ಮೂಡಲಗಿ :
ಮೂಡಲಗಿಯಲ್ಲಿ  ಹರಿಯುವ ಹಳ್ಳದಲ್ಲಿ ಇಂದು ಏಳು ಭ್ರೂಣಗಳು ಪತ್ತೆಯಾಗಿವೆ. ಇದನ್ನು ಕಂಡು ಮೂಡಲಗಿ ಜನತೆ ಬೆಚ್ಚಿಬೀಳುವಂತಾಗಿದೆ.


ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಕೊಳ್ಳದಲ್ಲಿ ಭ್ರೂಣಗಳು ಪತ್ತೆಯಾಗಿವೆ. ಚಾಕ್ಲೇಟ್ ಮಾರಾಟಕ್ಕೆ ಬಳಸುವ 5 ಪ್ಲಾಸ್ಟಿಕ್ ಡಬ್ಬಗಳಲ್ಲಿ 7 ಭ್ರೂಣಗಳನ್ನು ಹಾಕಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭ್ರೂಣದಲ್ಲಿದ್ದ ಡಬ್ಬಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. 

ಪತ್ತೆಯಾದ ಭ್ರೂಣಗಳು ಗರ್ಭಪಾತ ಮಾಡಿದ್ದವುಗಳಾಗಿವೆ. ಭ್ರೂಣಲಿಂಗ ಪತ್ತೆ ಮಾಡಿದ ನಂತರ ಇಂಥ ಕೃತ್ಯ ಎಸಗಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಭ್ರೂಣಗಳನ್ನು ಹೇಗೆ ಹತ್ಯೆಮಾಡಲಾಗಿದೆ, ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಕೆಲ ಭ್ರೂಣಗಳಿಗೆ 5 ತಿಂಗಳು, ಕೆಲ ಭ್ರೂಣಗಳಿಗೆ 7 ತಿಂಗಳು ಆಗಿರುವುದು ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಕೋಣೆ ಪ್ರತಿಕ್ರಿಯಿಸಿದ್ದಾರೆ.

ಶಾಸಕರ ಪ್ರತಿಕ್ರಿಯೆ :
ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿಯ ಹಳ್ಳಕ್ಕೆ ಹತ್ಯೆ ಮಾಡಿರುವ 7 ಭ್ರೂಣಗಳನ್ನು ಎಸೆದಿರುವ ಸಂಗತಿಯು ನನ್ನ ಗಮನಕ್ಕೆ ಬಂದಿದೆ. ಇದು ಹೀನ ಕೃತ್ಯವಾಗಿದ್ದು, ಸಮಾಜ ತಲೆ ತಗ್ಗಿಸುವಂತ ಸಂಗತಿಯಾಗಿದೆ. ಕಾನೂನುಬಾಹಿರವಾಗಿ ಮಾಡಿರುವ ವ್ಯಕ್ತಿಗಳನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವೆನು. ಈ ತರಹ ಪುನ: ನಡೆಯದಂತೆ ಆರೋಗ್ಯ ಇಲಾಖೆಯವರು ಕಟ್ಟೆಚ್ಚರವಹಿಸಬೇಕು ಎಂದು ಸೂಚಿಸಿರುವೆನು.
ಬಾಲಚಂದ್ರ ಜಾರಕಿಹೊಳಿ, 
ಕೆಎಂಎಫ್ ಅಧ್ಯಕ್ಷರು, ಶಾಸಕರು ಅರಭಾವಿ ಕ್ಷೇತ್ರ