ಪತ್ರೆ ಏರಿಸುವಾಗ ವಿದ್ಯುತ್‌ ತಗುಲಿ ಇಬ್ಬರು ದುರ್ಮರಣ..!

ಪತ್ರೆ ಏರಿಸುವಾಗ ವಿದ್ಯುತ್‌ ತಗುಲಿ ಇಬ್ಬರು ದುರ್ಮರಣ..!
Jana Jeevala Latest Breaking News Download App
Jana Jeevala Latest Breaking News Download App
Jana Jeevala Latest Breaking News Download App

ಪತ್ರೆ ಏರಿಸುವಾಗ ವಿದ್ಯುತ್‌ ತಗುಲಿ ಇಬ್ಬರು ದುರ್ಮರಣ..!

ಮನೆಗೆ ನೆರಳು ಮಾಡುವವರನ್ನು ಸಾವಿನ ಮನೆಗೆ ಕರೆದೊಯ್ದ ಸುಳಗಾ.

ಬೆಳಗಾವಿ: ಮನೆಗೆ ನೆರಳು ಮಾಡುವ ಸಲುವಾಗಿ ವಾಹನದಲ್ಲಿ ತಂದ ಪತ್ರೆಗಳನ್ನು ಮೇಲೆ ಏರಿಸುವಾಗ ವಿದ್ಯುತ್ ತಗುಲಿ ಇಬ್ಬರು ಸಾವನಪ್ಪಿದ್ದು, ಒರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ಸಂಜೆ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡದಿದೆ.

ಸುಳಗಾ ಗ್ರಾಮದ 25 ವರ್ಷದ ವಿನಾಯಕ ಕೃಷ್ಣಾ ಕಲಖಾಂಬಕರ ಹಾಗೂ ಪಕ್ಕದ ಗ್ರಾಮ ಬೆನಕನಹಳ್ಳಿಯ 57 ವರ್ಷದ ವಿಲಾಸ ಗೋಪಾಳ ಅಗಸಗೇಕರ ಇಬ್ಬರು ಮೃತ ದುರ್ದೈವಿಗಳು

ಮನೆ ಮಾಲಿಕ ವಿನಾಯಕ ತನ್ನ ಮನೆಯ ಮೇಲೆ ಕಟ್ಟಿರುವ ಕಟ್ಟಡಕ್ಕೆ ತಂದಿದ್ದ ಪತ್ರೆಗಳನ್ನು ಇಬ್ಬರು ಸೇರಿಕೊಂಡು ಮನೆಯ ಮೇಲೆ ಏರಿಸುವಾಗ ಮನೆಯ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್ ತಂತಿಗಳು ಪತ್ರೆಗಳಿಗೆ ತಾಗಿಗದ್ದರಿಂದ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆ ಸ್ಥಳಕ್ಕೆ ಕಾಕತಿ ಪಿಐ ಗುರುನಾಥ ಐ ಎಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.

ಮೃತ ಮನೆ ಮಾಲಿಕ ವಿನಾಯಕ ಒಬ್ಬನೆ ಮಗನಿದ್ದು ಎರಡು ವರ್ಷಗಳ ಹಿಂದೆ ತಂದೆ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕುಟುಂಬ ನಿರ್ವಹಣೆ ಮಾಡುತ್ತಿದ್ದ ಈತನನ್ನು ಕಳೆದುಕೊಂಡ ತಾಯಿ ರೋಧನ ಮುಗಿಲು ಮುಟ್ಟಿದ್ದು ಅಕ್ಷರಸಹಃ ಮನ ಕರುಗುವಂತಾಗಿದೆ.