ರಾಯಬಾಗದಲ್ಲಿ ಭರ್ಜರಿ ಬೇಟೆ ಮಾಡಿದ ಬೆಳಗಾವಿ CID ತಂಡ.


ದಿ. 26-11-2021 ರಂದು ಖಚಿತ ಮಾಹಿತಿ ಆಧರಿಸಿ ಬೆಳಗಾವಿ ಸಿಐಡಿ ಘಟಕದ ಡಿಟೆಕ್ಟಿವ್ ಸಬ್ – ಇನ್ಸ್ಪೆಕ್ಟರ್ ಲಕ್ಷ್ಮಣ ಹುಂಡರದ ಹಾಗೂ ತಂಡ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕಂಚಕರವಾಡಿ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಬಾಗ ತಾಲ್ಲೂಕಿನ ಕಂಚಕರವಾಡಿ ಗ್ರಾಮದ ಸಿದ್ರಾಮ ಮಾರುತಿ ತೋಳೆ ಬಂಧಿತ ಆರೋಪಿ. ಈತ ತನ್ನ ಹೋಲದ ಕಬ್ಬಿಣ ಗದ್ದೆಯಲ್ಲಿ ಗಾಂಜಾ ಬೆಳೆದು ಊರ ಹೋರಗಡೆ ಇರುವ ಹೋಲದಲ್ಲಿರುವ ಮನೆಯ ಮುಂದೆ ಗಾಂಜಾ ಮಾರಾಟ ಮಾಡುತ್ತಿದ್ದಾಗ ಬೆಳಗಾವಿ CID ತಂಡ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಈತನಿಂದ 9 ಕೆ.ಜಿ 750 ಗ್ರಾಂ ಹಸಿ ಗಾಂಜಾ ಗಿಡಗಳು ಇದರ ಅಂದಾಜು ಕಿಮ್ಮತ್ತು ರೂ .1,46,250 ಮತ್ತು ನಗದು ಹಣ ರೂ .130 / – ಜಫ್ತು ಮಾಡಿದ್ದಾರೆ.

ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಎನ್‌ಡಿಸಿ , ಸಿಐಡಿ ಬೆಳಗಾವಿ ಘಟಕದ ಸಿಬ್ಬಂದಿ ಜಗದೀಶ ಎಂ ಬಾಗನವರ , ಜಿ.ಆರ್.ಶಿರಸಂಗಿ , ಚಿದಂಬರ ಚಟ್ಟರಕಿ , ಜಾವೀದ ನಗಾರಿ ಮತ್ತು ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಬಾಳೇಶ ಶೆಟ್ಟೆಪ್ಪನವರ , ಎಸ್.ಎಸ್.ಚೌದ್ರಿ ರವರು ಭಾಗವಹಿಸಿದ್ದರು.


Leave A Reply

Your email address will not be published.